ಉಡುಪಿ: ಜಿಲ್ಲೆಯ1-19 ವರ್ಷದೊಳಗಿನ 2,58,920 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ


ಉಡುಪಿ: ಜಿಲ್ಲೆಯಲ್ಲಿ ಆಗಸ್ಟ್ 10 ರಂದುರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿಆಚರಿಸಲಾಗುತ್ತಿದ್ದು, ಜಿಲ್ಲೆಯ1 ರಿಂದ 19 ವರ್ಷದೊಳಗಿನ 2,58,920 ಮಕ್ಕಳಿಗೆ ಅಲ್‌ಬೆಂಡಾಜೋಲ್ ಮಾತ್ರೆಯನ್ನುವಿತರಿಸಲಾಗುವುದುಎಂದುಜಿಲ್ಲಾಧಿಕಾರಿಕೂರ್ಮಾರಾವ್ ಎಂ ತಿಳಿಸಿದ್ದಾರೆ.


ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಶಿಯಲ್ ಸ್ಕೂಲ್, ಐ.ಟಿ.ಐ ನರ್ಸಿಂಗ್ ಕಾಲೇಜು, ಪ್ರಥಮ ವರ್ಷದ ಪದವಿ ಹಾಗೂ ಇಂಜಿನಿಯರಿಂಗ್‌ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಶಾಲಾ- ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು.ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲುಆಶಾ ಕಾರ್ಯಕರ್ತೆಯರುಕ್ರಮವಹಿಸಲಿದ್ದಾರೆ.


1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ರಿಂದ 19 ವರ್ಷದೊಳಗಿನವರಿಗೆ ಇಡೀ ಮಾತ್ರೆಯನ್ನು ನೀಡಲಾಗುವುದು.ಚಿಕ್ಕ ಮಕ್ಕಳು ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆಅಥವಾಚೀಪಿ ಸೇವಿಸಬೇಕು. ಆಗಸ್ಟ್ 10 ರಂದು ಬಿಟ್ಟು ಹೋದ ಮಕ್ಕಳಿಗೆ ಹಾಗೂ ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರಆ. 17 ರ ಮಾಪ್‌ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು.ಇತರೆಔಷಧಿ ಸೇವಿಸುತ್ತಿರುವ ಮಕ್ಕಳು ವೈದ್ಯರ ಸಲಹೆ ಪಡೆದುಅಲ್‌ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸಬೇಕು.
ಜಂತುಹುಳು ಬಾಧೆಯಿಂದರಕ್ತಹೀನತೆ, ಪೌಷ್ಠಿಕ ಆಹಾರದಕೊರತೆ ಮತ್ತುದೈಹಿಕ ಹಾಗೂ ೌದ್ಧಿಕ ಬೆಳೆವಣಿಗೆಗೆ ತೊಂದರೆಉಂಟಾಗುತ್ತದೆ.ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ನೀಡುವುದರಿಂದ ಹೊಟ್ಟೆ ಹುಳುಗಳು ನಾಶವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.
ನೈರ್ಮಲ್ಯತೆಯಕೊರತೆ, ವೈಯಕ್ತಿಕ ಶುಚಿತ್ವದಕೊರತೆ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಈ ರೋಗವು ಬಾಧಿಸಲಿದ್ದು, ಹೊಟ್ಟೆನೋವು, ಭೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಈ ರೋಗದ ಲಕ್ಷಣವಾಗಿದೆ. ಉಗುರುಗಳ ಸ್ವಚ್ಛತೆಯಿಂದ, ಆಹಾರ ಸೇವನೆ ರಕ್ಷೆಗಳನ್ನು ಬಳಸಿದ್ದಲ್ಲಿ ಜಂತುಹುಳುವಿನ ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆಎಂದುಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Latest Indian news

Popular Stories