ಬಿಎಸ್‌ವೈ ಉತ್ತರಾಧಿಕಾರಿ ಯಾರು ?

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ನಿರ್ಗಮಿಸುವದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಎಂಬ ಪ್ರಶ್ನೆ ಚರ್ಚೆಗೆ ಬಂದಿದೆ.
ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮುದಾಯ ಶೇ. 16 ರಷ್ಟು ಜನಸಂಖ್ಯೆ ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರೇ ಪ್ರಬಲ ಸಮುದಾಯ. ಹೀಗಾಗಿ ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ಯಡಿಯೂರಪ್ಪ ಶಕ್ತಿಯನ್ನ ಬಿಜೆಪಿ ಹೈಕಮಾಂಡ್ ಬಳಸಿಕೊಳ್ಳಲಿದೆ. ಆದರೆ, ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡಬಹುದು ಎನ್ನುವುದು ಮಹತ್ವ ಪಡೆದುಕೊಂಡಿದೆ.
ರಾಜೀನಾಮೆ ನಂತರ ಯಡಿಯೂರಪ್ಪ ಅವರು ರಾಜಕೀಯವಾಗಿ ಅಷ್ಟೇನೂ ಸಕ್ರಿಯವಾಗಿರಲು ಸಾಧ್ಯವಿಲ್ಲ. ಹೆಚ್ಚೆಂದರೆ, 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭಾ ಚುನಾವಣೆಗೆ ಪಕ್ಷದ ಪರ ಯಡಿಯೂರಪ್ಪ ಪ್ರಚಾರ ನಡೆಸಬಹುದು.
ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಆಗುವುದು ಖಚಿತ. ಯಡಿಯೂರಪ್ಪಗೆ ಒಟ್ಟು ಐವರು ಮಕ್ಕಳಿದ್ದಾರೆ. ಅರುಣಾದೇವಿ, ಪದ್ಮಾವತಿ, ಉಮಾದೇವಿ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು. ಈಗ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅಪ್ಪನ ರಾಜಕೀಯ ಉತ್ತರಾಧಿಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಆಯ್ಕೆ ಕೂಡ ಯಡಿಯೂರಪ್ಪ ಕುಟುಂಬದ್ದು. ಎಲ್ಲ ಪ್ರಭಾವಿ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಮಾಡಿದಂತೆ ಯಡಿಯೂರಪ್ಪ ಕೂಡ ತಮ್ಮ ಮಗ ವಿಜಯೇಂದ್ರರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಮಾಡುತ್ತಿದ್ದಾರೆ. ಈ ಬಗ್ಗೆ ಐದಾರು ವರ್ಷಗಳ ಹಿಂದೆಯೇ ಯಡಿಯೂರಪ್ಪ ಕುಟುಂಬದಲ್ಲೇ ಅಪ್ಪನ ರಾಜಕೀಯ ಉತ್ತರಾಧಿಕಾರಿ ಯಾರಾಗಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಹಿರಿಯ ಮಗ ಬಿ.ವೈ.ರಾಘವೇಂದ್ರ, ರಾಜಕೀಯವಾಗಿ ಆಕ್ರಮಣಕಾರಿ ಧೋರಣೆ ಹೊಂದಿಲ್ಲ. ಮೃದು ಸ್ವಭಾವದ ವ್ಯಕ್ತಿ.
ರಾಘವೇಂದ್ರಗೆ ಹೋಲಿಸಿದರೆ, ವಿಜಯೇಂದ್ರಗೆ ಹೆಚ್ಚಿನ ನಾಯಕತ್ವ ಗುಣಗಳಿವೆ. ವಿಜಯೇಂದ್ರಗೆ ರಾಜಕೀಯ ಚಾಕಚಾಕ್ಯತೆ ಇದೆ. ವಿಜಯೇಂದ್ರಗೆ ರಾಜಕೀಯವಾಗಿ ಆಕ್ರಮಣಕಾರಿ (ಪೊಲಿಟಿಕಲ್ ಆಗ್ರೆಸಿವ್ ನೆಸ್) ಗುಣ, ಸ್ವಭಾವ ಇದೆ. ಎಲ್ಲರನ್ನೂ ಸಂಭಾಳಿಸಿಕೊAಡು ಜೊತೆಗೆ ಕರೆದುಕೊಂಡು ಹೋಗುವ ಸ್ವಭಾವ, ಗುಣ ವಿಜಯೇಂದ್ರರಲ್ಲಿದೆ ಎನ್ನುತ್ತಾರೆ, ಬಿಎಸ್ವೆöÊ ಕುಟುಂಬದ ಆಪ್ತರು.
`ತಂದೆ ಯಡಿಯೂರಪ್ಪ ಅವರಂತೆ ವಿಜಯೇಂದ್ರಗೆ ಮಾಸ್ ಲೀಡರ್ ಆಗುವ ಸಾಮರ್ಥ್ಯ ಇದೆ. ವಿಜಯೇಂದ್ರ ಹೋದ ಕಡೆಯೆಲ್ಲಾ ಜನರು ಸೇರುತ್ತಾರೆ ಎಂಬ ಮಾತು ಸಾಮಾನ್ಯವಾಗಿದೆ. ಬಿ.ವೈ.ರಾಘವೇದ್ರ ಶಿವಮೊಗ್ಗಕ್ಕೆ ಸೀಮಿತರಾದರು. ಆದರೆ, ವಿಜಯೇಂದ್ರ ಬೆಂಗಳೂರುನಲ್ಲಿದ್ದುಕೊAಡು, ರಾಜಧಾನಿಯನ್ನ ಕೇಂದ್ರ ಸ್ಥಾನ ಮಾಡಿಕೊಂಡು ರಾಜ್ಯ ಸುತ್ತಿದ್ದಾರೆ. ಸಂಪನ್ಮೂಲ ಸಂಗ್ರಹಿಸಿ ಚುನಾವಣೆ ವೇಳೆ ಖರ್ಚು ಮಾಡುವ ಸಾಮರ್ಥ್ಯ ಇದೆ. ವಿಜಯೇಂದ್ರಗೆ ರಾಜಕೀಯ ಚಾಕಚಾಕ್ಯತೆ ಇದೆ. ಲಿಂಗಾಯತ ಯುವ ಸಮುದಾಯ ವಿಜಯೇಂದ್ರನತ್ತ ಆಕರ್ಷಿತರಾಗಿದ್ದಾರೆ. ಲಿಂಗಾಯತರು ಮಾತ್ರವಲ್ಲದೇ, ಬೇರೆ ಸಣ್ಣ ಸಮುದಾಯದವರನ್ನು ವಿಜಯೇಂದ್ರ ಬಿಜೆಪಿಯತ್ತ ಆಕರ್ಷಿಸುತ್ತಿದ್ದಾರೆ. ಹೀಗಾಗಿ ವಿಜಯೇಂದ್ರ ಅವರೇ ಯಡಿಯೂರಪ್ಪರ ರಾಜಕೀಯ ಉತ್ತರಾಧಿಕಾರಿ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

Latest Indian news

Popular Stories