ನಾಪೋಕ್ಲುವಿನಲ್ಲಿ ತಡೆಗೋಡೆ ಕುಸಿದು ಅಂಗಡಿ ಮಳಿಗೆಗಳಿಗೆ ಅಪಾರ ಹಾನಿಯಾಗಿದ್ದು ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ.
ನಾಪೋಕ್ಲು ನಿವಾಸಿ ಅಜ್ಜೇಟಿರ ಬೋಪಣ್ಣ ಎಂಬುವರಿಗೆ ಸೇರಿದ ಅಂಗಡಿ ಮಳಿಗೆಗಳ ಮೇಲೆ ತಡೆಗೋಡೆ ಬಿದ್ದು ಹಾನಿಯಾಗಿದ್ದು ಹತ್ತು ಲಕ್ಷ ನಷ್ಟವಾಗಿದೆ.
ಸೂಕ್ತ ಪರಿಹಾರಕ್ಕಾಗಿ ಅಂಗಡಿ ಮಾಲೀಕರ ಆಗ್ರಹ ಮಾಡಿದ್ದು ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಮುಖ್ಯಾಂಶ:
ನಾಪೋಕ್ಲು ವಿಭಾಗದಲ್ಲಿ ಉಕ್ಕಿ ಹರಿದು ಜನರಿಗೆ ದ್ವಿಗ್ಬಂಧನ ವಿಧಿಸಿದ ಕಾವೇರಿ ನದಿ.
ನಾಪೋಕ್ಲು ಕೊಟ್ಟಮುಡಿ ಮಡಿಕೇರಿ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಸಂಚಾರ ಸ್ಥಗಿತ
ನಾಪೋಕ್ಲು -ಮೂರ್ನಾಡು ಮುಖ್ಯರಸ್ತೆ, ಚೆರಿಯ ಪರಂಬು ಕಲ್ಲುಮೊಟ್ಟೆ ರಸ್ತೆಯಲ್ಲೂ ಪ್ರವಾಹದ ಮಟ್ಟ ಹೆಚ್ಚಳವಾಗಿ ಮನೆಗಳಿಗೆ ನುಗ್ಗುತ್ತಿರುವ ನೀರು
ಮಂಗಳವಾರವು ಮುಂದುವರಿದ ವರುಣನ ಆರ್ಭಟ, ಪ್ರವಾಹದ ಮಟ್ಟ ಮತ್ತೆ ಹೆಚ್ಚಳವಾಗುವ ಸಾಧ್ಯತೆ.
ಚೆರಿಯಪರಂಬು ಕಾವೇರಿ ನದಿ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳ ಸೂಚನೆ.