ಕೊಡಗಿನಲ್ಲಿ ಸಂಬಂಧಿಯಿಂದಲೇ ‘ಪೈಶಾಚಿಕ ಕೃತ್ಯ’ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಮಡಿಕೇರಿ : ಸಂಬಂಧಿಯೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ಪಾಪಣ್ಣ ಅಲಿಯಾಸ್ ಸುಬ್ಬಯ್ಯ( 45) ಎಂಬಾ ಅತ್ಯಾಚಾರ ಎಸಗಿದ್ದು, ಈತ ಬಾಲಕಿಯ ಸಂಬಂಧಿಯಾಗಿದ್ದು, ಯಾರೂ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಘಟನೆ ಕುರಿತು ಬಾಲಕಿ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ಪಾಪಣ್ಣ ಅಲಿಯಾಸ್ ಸುಬ್ಬಯ್ಯನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Latest Indian news

Popular Stories