ಕೊಡಗು: ಎರಡು ಗಾಂಜಾ ಪ್ರಕರಣಗಳು ಬೆಳಕಿಗೆ ಇಬ್ಬರ ಬಂಧನ

ಜಿಲ್ಲೆಯ ಗೋಣಿಕೊಪ್ಪ ಬಳಿಯ ಮಾಯಮುಡಿ ಗ್ರಾಮದಲ್ಲಿ ಅಲ್ಲಿನ ನಿವಾಸಿ ಸುಜಯ್‌ ಎಂಬವರು ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ದಿ.08/07/2023ರಂದು ಗೋಣಿಕೊಪ್ಪ ಠಾಣೆಯ ಪಿಎಸ್‌ಐ ದೀಕ್ಷಿತ್‌ ಹಾಗೂ ತಂಡ ಪತ್ತೆ ಹಚ್ಚಿ 49ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ತಂಡದ ಕಾರ್ಯ ಕ್ಷಮತೆಯನ್ನು ಶ್ಲಾಘಿಸಲಾಗಿದೆ.


ದಿ. 08/07/2023ರಂದು ಜಿಲ್ಲೆಯ ಮೂರ್ನಾಡು ಬಳಿಯ ಕೊಂಡಂಗೇರಿ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಪಂಚವಳ್ಳಿ ಮೂಲದ ಸದ್ದಾಂ ಹುಸೇನ್‌ ಎಂಬಾತನನ್ನು ಮಡಿಕೇರಿ ಗ್ರಾ. ಠಾಣೆಯ ಪಿಐ ಉಮೇಶ್‌ ಉಪ್ಪಳಿಕೆ ಹಾಗೂ ತಂಡವು ಬಂಧಿಸಿ ಆತನಿಂದ 241.4 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.

Latest Indian news

Popular Stories