ಕೊಡಗು: ವೃದ್ಧ ತಾಯಿಯ ಕಡೆಗಣನೆ – ಮಗಳಿಂದ ಆಸ್ತಿ ವಾಪಾಸು ಪಡೆದು ತಾಯಿಗೆ ನೀಡಿದ ನ್ಯಾಯಾಲಯ!

ಕೊಡಗು:ವೃದ್ಧ ಪೋಷಕರ ಕಡೆಗಣನೆ ಹಿನ್ನೆಲೆಯಲ್ಲಿ ಮಗಳಿಂದ‌ ಪೋಷಕರ ಆಸ್ತಿಯನ್ನು ನ್ಯಾಯಾಲಯ ವಾಪಾಸು ಕೊಡಿಸಿದೆ.

ಕೊಡಗು ಉಪವಿಭಾಗಾಧಿಕಾರಿ‌ ನ್ಯಾಯಾಲಯ ಆದೇಶ ಈ ಆದೇಶ ಹೊರಡಿಸಿದ್ದು ಪೋಷಕರನ್ನು ಕಡೆಗಣಿಸುವ ಮಕ್ಕಳಿಗೆ ಬುದ್ದಿ ಕಲಿಸಿದೆಮ

ಬಿಎಸ್ ಜಾನಕಿ ಮಗಳಿಂದ ಆಸ್ತಿ ವಾಪಾಸ್ ಪಡೆದ ವೃದ್ಧೆಯಾಗಿದ್ದು, ಎರಡನೇ ಮಗಳು ಜಯಲಕ್ಷ್ಮಿಗೆ ಈ ಮುಂಚೆ ಆಸ್ತಿಯನ್ನು ದಾನ ನೀಡಿದ್ದರು.

15 ಸೆಂಟ್ ಜಾಗ ದಾನ ನೀಡಿದ್ದ ಜಾನಕಿ,ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ‌ ನಿವಾಸಿಯಾಗಿದ್ದಾರೆ. ತಾಯಿಯ ಯೋಗಕ್ಷೇಮ‌ ನೋಡದೆ ಜಯಲಕ್ಷ್ಮಿ ನಿರ್ಲಕ್ಷ್ಯ ಮಾಡಿದ ಕಾರಣ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

ಜಾನಕಿ ಅವರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ರಿಂದ ವಿಚಾರಣೆ ನಡೆದಿತ್ತು. ವಿಚಾರಣೆ ನಡೆಸಿ ಇದೀಗ ಪೋಷಕಿ ಜಾನಕಿಗೆ ಆಸ್ತಿ‌ಯನ್ನು ಹಿರಿಯ ನಾಗರಿಕರ ರಕ್ಣಣಾ ಕಾಯ್ದೆ -2007 ರ ಅಡಿಯಲ್ಲಿ ವಾಪಾಸ್ ಕೊಡಿಸಿದ್ದಾರೆ.

Latest Indian news

Popular Stories