ನದಿಯಲ್ಲಿ ಬಿದ್ದು ಇಬ್ಬರು ಮಕ್ಕಳ ಮೃತ್ಯು

ಕಾವೇರಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಪುಟ್ಟ ಮಕ್ಕಳು ಸಾವಿಗೀಡಾಗಿರುವ ದಾರುಣ ಘಟನೆ ಕುಶಾಲನಗರದ ಕೂಡ್ಲುರಿನಲ್ಲಿ ಇಂದು ಬೆಳಿಗ್ಗೆ ನಡೆದಿರುವ ಕುರಿತು ವರದಿಯಾಗಿದೆ.

ಕೂಡ್ಲುರಿನ ಸತೀಶ್ ಎಂಬುವವರ 5 ವರ್ಷ ಪ್ರಾಯದ ಮಗ ಮತ್ತು ನಾಗ ಎಂಬುವವರ 9 ವರ್ಷ ಪ್ರಾಯದ ಮಗ ಮನೆ ಹಿಂಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಆಕಸ್ಮಿಕವಾಗಿ ಬಿದ್ದು ಜಲಸಮಾಧಿಯಾಗಿರುವ ನತದೃಷ್ಟ ಮಕ್ಕಳಾಗಿದ್ದಾರೆ. ಮೃತ ಮಕ್ಕಳ ಪೈಕಿ ಸತೀಶ್ ವರ ಮಗನ ಮೃತ ದೇಹ ಪತ್ತೆಯಾಗಿದೆ, ನಾಗರವರ ಪುತ್ರನ ಮೃತದೇಹದ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

Latest Indian news

Popular Stories