ಭಾರತದಲ್ಲೇ ಪ್ರಥಮವಾಗಿ ವಿಶಿಷ್ಟ ದಿನ ಆಚರಿಸಿದ ಕೊಡಗು ರೈತಸಂಘ

ಸರಕಾರ ಜಿಲ್ಲಾ ಕೇಂದ್ರದಲ್ಲಿ ಸೆಪ್ಟಂಬರ್ 11 ರಂದು ಹುತಾತ್ಮ ದಿನ ಆಚರಿಸಿದ ಜಾಗದಲ್ಲೇ ರೈತಸಂಘವು, ವನ್ಯಪ್ರಾಣಿಗಳಿಂದ ಪ್ರಾಣ ಕಳೆದುಕೊಂಡ ಜನ ಸಾಮಾನ್ಯರ ಫೋಟೋ ಇಟ್ಟು,ಅವರ ಕುಟುಂಬದವರೊಂದಿಗೆ, ಗೌರವ ಹಾಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮ ದಿನ ಆಚರಿಸಿತು.

ವನ್ಯಜೀವಿಗಳಿಂದ ಅರಣ್ಯಾಧಿಕಾರಿಗಳು ಜೀವ ಕಳೆದುಕೊಂಡರೆ ಮಾತ್ರ ಹುತಾತ್ಮರಲ್ಲ….ವನ್ಯಜೀವಿಗಳಿಂದ ಪ್ರಾಣಕಳೆದುಕೊಂಡ ಕಾರ್ಮಿಕರು, ರೈತರು, ಜನಸಾಮಾನ್ಯರೆಲ್ಲರೂ ಹುತಾತ್ಮರೇ…
ಹುತಾತ್ಮ ದಿನ ಆಚರಿಸುವುದಾದರೆ ವನ್ಯಜೀವಿಗಳಿಂದ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡು, ಹುತಾತ್ಮರಾದ ಪ್ರತಿಯೊಬ್ಬರಿಗೂ ಗೌರವ ಕೊಟ್ಟು ಮುಂದಿನ ವರ್ಷದಿಂದ ಸೆಪ್ಟಂಬರ್ ತಿಂಗಳ 11 ನೇ ತಾರೀಕು ಹುತಾತ್ಮ ಅರಣ್ಯ ಹುತಾತ್ಮ ದಿನವನ್ನು ಆಚರಿಸಬೇಕೆಂದು ಅರಣ್ಯ ಸಚಿವರಿಂದ ಪ್ರಧಾನ ಮಂತ್ರಿಯವರೆಗೂ ರೈತಸಂಘ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ರೈತ ಸಂಘದ ಈ ಕಾರ್ಯ ಹಾಗೂ ಹೋರಾಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Q2CoorG NewS Suntikoppa – 5 Link????
Follow this link to join my WhatsApp group: https://chat.whatsapp.com/FoXTWEomlhqDdFGlJJbcWu
ಹೊಸ ಸದಸ್ಯರಿಗೆ ಮಾತ್ರ
JOIN GROUP

Latest Indian news

Popular Stories