ವಿರಾಜಪೇಟೆ: ಸರಕಾರಿ ಆಂಬ್ಯುಲೆನ್ಸ್ ಗೆ ಅನಾರೋಗ್ಯ!


ಸೂಕ್ತ ಸಮಯದಲ್ಲಿ ಸರಕಾರದ ಆಂಬುಲೆನ್ಸ್ ದೊರೆಯದೆ ಅನಾಥ ವೃದ್ಧರೊಬ್ಬರು ಜೀವತೆತ್ತಿದ್ದಾರೆ.


ವಿರಾಜಪೇಟೆ. ಕೆ ಎಸ್ ಆರ್ ಟಿ ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಬೆಳಗ್ಗೆಯಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕಂಡು ರಕ್ಷಣಾ ವೇದಿಕೆ ಯ ತಾಲ್ಲೂಕು ಅಧ್ಯಕ್ಷರಾದ ಅನಿಲ್ ಕುಮಾರ್ ರವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಅಧ್ಯಕ್ಷರು ಮತ್ತು ಸದಸ್ಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ರಕ್ಷಣಾ ವೇದಿಕೆಯ ಸದಸ್ಯರ ಜೊತೆಗೆ ಕೈ ಜೋಡಿಸಿ ಆ ವ್ಯಕ್ತಿಗೆ ಸ್ಥಾನ ಮಾಡಿಸಿ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿದ್ದಾರೆ. ಆದರೆ 108 ಆಗಲಿ, ಆಸ್ಪತ್ರೆಯ ಆಂಬುಲೆನ್ಸ್ ಕೂಡ ಇರಲಿಲ್ಲ. ತದನಂತರ ವಿರಾಜಪೇಟೆ ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿರವರಿಗೆ ಕರೆ ಮಾಡಿದಾಗ ತುರ್ತು ಚಿಕಿತ್ಸಾ ವಾಹನವನ್ನು ಕಳುಹಿಸಿಕೊಟ್ಟಿದ್ದಾರೆ. ತಕ್ಷಣವೇ ವೃದ್ಧನನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇವರ ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶಾವಗಾರದಲ್ಲಿ ಇಡಲಾಗಿದೆ. ಇವರಿಗೆ ಸಂಬಂಧಪಟ್ಟವರು ಇದ್ದಲ್ಲಿ ಪೊಲೀಸ್ ಠಾಣೆ ಹಾಗೂ ಶಿವರಾಮೇ ಗೌಡರ ಬಣ ರಕ್ಷಣಾ ವೇದಿಕೆಯ ಅಧ್ಯಕ್ಷರು ಅಥವಾ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನೆ ಮಾಡಲು ಸೂಕ್ತ ರೀತಿಯ ತುರ್ತು ಚಿಕಿತ್ಸಾ ವಾಹನ ಸೌಲಭ್ಯ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ. ಆಸ್ಪತ್ರೆಗೆ ಕರೆ ಮಾಡಿದಾಗ ಕಳೆದ 15 ದಿನಗಳಿಂದ ತುರ್ತು ಚಿಕಿತ್ಸಾ ವಾಹನ ಕೆಟ್ಟು ನಿಂತಿದೆ ಎಂದು ಉತ್ತರಿಸುತ್ತಾರೆ. ಈ ರೀತಿ ಆದಲ್ಲಿ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಚಿಂತಿಸಬೇಕು.

Latest Indian news

Popular Stories