ವಿ.ಎಸ್.ಕೆ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಕೊಡಗಿನ ವಿದ್ಯಾರ್ಥಿಗಳ ಉತ್ತಮ‌ ಸಾಧನೆ

ಮೈಸೂರಿನ ಯುವರಾಜ ಒಳಾಂಗಣದಲ್ಲಿ ನಡೆದ ವಿ.ಎಸ್.ಕೆ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಸಮೀಪದ ಮಾದಾಪುರದ ಹಟ್ಟಿಹೂಳೆ ನಿರ್ಮಲ ವಿದ್ಯಾ ಭವನ ಶಾಲೆಯ ವಿದ್ಯಾರ್ಥಿಗಳು 11 ವರ್ಷದ ಬಾಲಕರ ವಿಭಾಗದಲ್ಲಿ ಎ.ಸಜಿನ್ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ, 12 ವರ್ಷದ ಬಾಲಕರ ವಿಭಾಗದಲ್ಲಿ ಡೀನ್ ಅಪ್ಪಣ್ಣ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ 12ವರ್ಷದ ವಿಭಾಗದಲ್ಲಿ ಎಂ.ಎಸ್. ಕವನ ಕಟಾ ಪ್ರಥಮ ಹಾಗೂ ಕುಮಿತೆ ದ್ವಿತೀಯ ಸ್ಥಾನ ಗಳಿಸಿದರೆ, . 13ವರ್ಷ ವಿಭಾಗದಲ್ಲಿ ಮರಿಯಾ ಜೋಶ್ನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ,13 ವರ್ಷದ ವಿಭಾಗದಲ್ಲಿ ಜಿ.ಸಿ.ಮೌನ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ, ಕುಮಿತೆ ವಿಭಾಗದಲ್ಲಿ 13 ವರ್ಷದ ಕಟಾ ವಿಭಾಗದಲ್ಲಿ ಲಿಖಿತ ತೃತೀಯ ಸ್ಥಾನ ಪಡೆದಿರುತ್ತಾರೆ.


ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ 11 ವರ್ಷದ ಕಟಾ ವಿಭಾಗದಲ್ಲಿ ವಿ.ಆರ್.ವರ್ಷ ಪ್ರಥಮ ಸ್ಥಾನ, ಆರ್.ಜೀವಿಕ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.ಬಾಲಕರ 12 ವರ್ಷ ಬಾಲಕರ ವಿಭಾಗದಲ್ಲಿ ಎಂ.ಎಸ್.ದಿಗಂತ್ ಪ್ರಥಮ ಸ್ಥಾನ, 10 ವರ್ಷ ಬಾಲಕರ ವಿಭಾಗದಲ್ಲಿ ಡಿ.ಎ.ಮನೀಶ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬಾಲಕಿಯರು ವಿಭಾಗದಲ್ಲಿ ಕಾವೇರಿ ಮನೋಜ್ 10 ವರ್ಷದ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಬಾಲಕರ 11 ವರ್ಷದ ಬಾಲಕರ ವಿಭಾಗದಲ್ಲಿ ಕೆ.ಎಲ್.ಶೋಭಿತ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಎಸ್.ಡಿ.ಪ್ರಧನ್ ಪೊನ್ನಣ್ಣ 12 ವರ್ಷದ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಬಾಲಕರ ವಿಭಾಗದ ಬ್ಲ್ಯಾಕ್ ಬೆಲ್ಟ್ ವಿಭಾಗದ ಕಿರಿಯರ ವಿಭಾಗದಲ್ಲಿ ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆ.ಎಸ್.ಅಕ್ಷಯ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ
ಒಟ್ಟಾರೆಯಾಗಿ ಕೊಡಗಿಗೆ ಪ್ರಥಮ 8, ದ್ವಿತೀಯ 9, ಹಾಗೂ ಮೂರು ತೃತೀಯ ಸ್ಥಾನ ಲಭಿಸಿದೆ.
ಇವರೆಲ್ಲ ಸುಂಟಿಕೊಪ್ಪದ ಕರಾಟೆ ಪಟು ಬಿ ಎಂ ಮುಖೇಶ್ ಅವರಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳಾಗಿದ್ದಾರೆ.

Latest Indian news

Popular Stories