ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿದ್ದು ವಿಷಾದನೀಯ – ಶಾಸಕ ಎ.ಎಸ್.ಪೊನ್ನಣ ಪ್ರತಿಕ್ರಿಯೆ.

ಮಡಿಕೇರಿ: ವೀರ ಸೇನಾನಿ,ದೇಶ ಕಂಡ ಅಪ್ರತಿಮ ಸೇನಾನಿ ಹಾಗೂ ಭಾರತದ ಶೌರ್ಯದ ಸಂಕೇತವಾಗಿದ್ದ ಜನರಲ್ ತಿಮ್ಮಯ್ಯ ನವರ ಪುತ್ಥಳಿ ಗೆ ಹಾನಿಯಾದ ವಿಚಾರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಇದು ಅಜಾಗರೂಕತೆಯ ವಾಹನ ಚಾಲನೆಯಿಂದ ನಡೆದಿದೆ ಎಂದು ಕಂಡು ಬರುತ್ತಿದ್ದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೈಜ ವರದಿ ನೀಡಲು ಸೂಚಿಸಲಾಗಿದೆ.

ಸಂಬಂಧಪಟ್ಟವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜನರು ಆತಂಕಕ್ಕೆ ಒಳಗಾಗಬಾರದು ಎಂದರು.

ಜಿಲ್ಲೆಯ ಜನತೆಯಲ್ಲಿ ಭಾವನಾತ್ಮಕ ಸಂಭಂದ ಹೊಂದಿರುವ ಜನರಲ್ ತಿಮ್ಮಯ್ಯ ನವರ ಪುತ್ಥಳಿಯನ್ನು ಗೌರವ ಪೂರ್ವಕವಾಗಿ ಅದೇ ಸ್ಥಳದಲ್ಲಿ ಮರು ಸ್ಥಾಪಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.

Latest Indian news

Popular Stories