ಶನಿವಾರಸಂತೆ:ಫೆ೧೫:-ಶನಿವಾರಸAತೆ ನಿವಾಸಿ, ಮಾಜಿ ಪುರಸಭಾ ಅಧ್ಯಕ್ಷ ದಿ.ಗಂಗಪ್ಪ ಕರ್ಕೆರ ಅವರ ಪುತ್ರರಾದ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಜಿ.ನರೇಶ್ಚಂದ್ರ[೬೯] ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಕಳೆದ ೩೨ ವರ್ಷಗಳಿಂದ ಸ್ಥಳೀಯ ದಿನ ಪತ್ರಿಕೆಯೊಂದರಲ್ಲಿ ಶನಿವಾರಸಂತೆ ಭಾಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ನರೇಶ್ಚಂದ್ರ ಅವರು ಕಳೆದ ೨ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಕುಟುಂಬಸ್ಥರು ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ರಾತ್ರಿ ನಿಧನರಾದರು. ಮೃತರು ಪತ್ನಿ ಸೇರಿದಂತೆ ಸಹೋದರ, ಸಹೋದರಿಯಾದ ಇತ್ತಿಚಿಗೆ ಗೌಡಳ್ಳಿಯಲ್ಲಿ ನಡೆದ ಸೋಮವಾರಪೇಟೆ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷೆಯಾಗಿದ್ದ ಸಾಹಿತಿ, ಲೇಖಕಿ ಪತ್ರಕರ್ತೆ ಶ.ಗ.ನಯನತಾರ ಪ್ರಕಾಶ್ಚಂದ್ರ ಇವರುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಶನಿವಾರಸಂತೆಯ ಹಿಂದೂರುದ್ರಭೂಮಿಯಲ್ಲಿ ನೆರವೇರಿಸಲಾಯೀತು.