ತೊರೆನೂರು ಗ್ರಾಮದಲ್ಲಿ ವಿದ್ಯಾರ್ಥಿ ಸಾವು
ತೊರೆನೂರು ಗ್ರಾಮದಲ್ಲಿ ಪ್ರೌಢಶಾಲೆಯ ಬಳಿಯ ಜಮೀನಿನಲ್ಲಿ ನೆಲೆಸಿರುವ ಟಿ.ಕೆ. ರುದ್ರಪ್ಪ ಅವರ ಮೊಮ್ಮಗ k ಟಿ.ಎಂ.ತರುಣ್ ( 7 ವರ್ಷ )
( ಟಿ.ಆರ್.ಮಧು ಅವರ ಮಗ ತರುಣ್ )
ಎಂಬ ವಿದ್ಯಾರ್ಥಿಯು ಭಾನುವಾರ ಬೆಳಿಗ್ಗೆ ತಮ್ಮ ಮನೆಯ ಬಳಿ ಶುಂಠಿ ಚೀಲಗಳನ್ನು ತುಂಬಿ ನಿಲ್ಲಿಸಿದ್ದ ಎತ್ತಿನ ಗಾಡಿಯು ಬಿದ್ದ ಅವಘಡದಿಂದ ದುರ್ಮರಣಗೊಂಡಿರುವ ಘಟನೆ ಸಂಭವಿಸಿದೆ.
ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ದುರ್ದೈವಿ ಮಗು ತರುಣ್, ಮನೆಯ ಅಂಗಳದಲ್ಲಿ ನಿಂತಿದ್ದ ಶುಂಠಿ ತುಂಬಿದ್ದ ಎತ್ತಿನ ಗಾಡಿಯ ಹಿಂಬದಿಯು ಭಾರ ಹೆಚ್ಚಾಗಿ ಗಾಡಿಯು ಮಗುಚಿ ಬಿದ್ದಾಗ ಗಾಡಿ ಬಳಿ ನಿಂತಿದ್ದ ವಿದ್ಯಾರ್ಥಿ ತರುಣ್ ತಲೆಗೆ ತೀವ್ರಪೆಟ್ಟಾಗಿ ರಕ್ತಸ್ರಾವವಾಗಿದ್ದು, ತಕ್ಷಣದಲ್ಲಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ತರುಣ್ ಮೃತಪಟ್ಟಿರುತ್ತಾನೆ.
ಮೃತ ದುರ್ದೈವಿ ವಿದ್ಯಾರ್ಥಿ ತರುಣ್ , ತೊರೆನೂರು ಗ್ರಾಮದ ಮಧು ಮತ್ತು ಅನು ದಂಪತಿಯ ಮೊದಲ ಪುತ್ರ .
ಪ್ರಕರಣವು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ..