ಕಲಿಕಾ ಶೈಲಿಯಲ್ಲಿ ಬದಲಾವಣೆ ಅಗತ್ಯ | ಶಾಹಿನ್ ವಿದ್ಯಾ ಸಂಸ್ಥೆ ಸಿ.ಇ.ಓ ತೌಸೀಫ್ ಮಡಿಕೇರಿ ಅಭಿಮತ

ಕೊಡಗಿನ ವಿರಾಜ ಪೇಟೆಯ ಖಾಸಗಿ ಸಂಸ್ಥೆ ಬ್ರೈಟ್ ಪಬ್ಲಿಕ್ ಶಾಲಾ ಅಧ್ಯಾಪಕರುಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜ್ಯದ ಖ್ಯಾತ ಶಿಕ್ಷಣ ಶಾಹಿನ್ ಸಂಸ್ಥೆಯ ಸಿ.ಇ.ಓ ಡಾ. ತೌಸೀಪ್ ಮಡಿಕೇರಿ ಮಾತನಾಡಿ,” ಇಂದು ಎಲ್ಲಾ ಕ್ಷೇತ್ರಗಳು ಆಧುನಿಕ ಗೊಂಡಿದೆ. ಅದರಲ್ಲಿ ಶಿಕ್ಷಣ ಕ್ಷೇತ್ರವು ಹೊರತಲ್ಲ, ಚಿಕ್ಕ. ಮಕ್ಕಳು ತಮ್ಮ ಮನೆ ಬಾಷೆಯೊಂದಿಗೆ ಇತರ ಭಾಷೆಗಳನ್ನು ಮಾತನಾಡುತ್ತಾರೆ. ಟಿ.ವಿಯಲ್ಲಿ ಪ್ರಸಾರವಾಗುವ ಕಾರ್ಟೂನ್, ಹಾಗೂ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಹಿಂದಿ ಇನ್ನಿತರ ಭಾಷೆಗಳನ್ನು ಕರಗತ ಮಾಡುತ್ತಾರೆ. ತರಗತಿಗಳಲ್ಲೂ ಅವರ ಸಾಮರ್ಥ್ಯಕ್ಕನುಗುಣವಾಗಿ ಕಲಿಕಾ ಶೈಲಿಯಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡಬೇಕು. ಬದಲಾವಣೆಯ ಕಾಲಘಟ್ಟದಲ್ಲಿ ಕನಿಷ್ಟ ಪಕ್ಷ ಹತ್ತು ಮಕ್ಕಳಿರುವ ತರಗತಿಗೆ ಓರ್ವ ಅಧ್ಯಾಪಕರುಗಳನ್ನು ನೇಮಿಸಿದರೆ ವಿದ್ಯಾರ್ಥಿಗಳಲ್ಲಿರು ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

‌ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಜಮಾಅತೆ ಇಸ್ಲಾಮೀ ಜಿಲ್ಲಾ ಅಧ್ಯಕ್ಷ ಸಿ.ಹೆಚ್ ಅಪ್ಸರ್ , ಪತ್ರಕರ್ತ ಅಬ್ದುಲ್ಲಾ ಮಡಿಕೇರಿ ಉಪಸ್ಥಿತರಿದ್ದರು ಬ್ರೈಟ್ ಶಾಲಾ ಆಡಳಿತ ಮಂಡಳಿ ಅದ್ಯಕ್ಷ ಕೆ.ಟಿ ಬಶೀರ್, ಟ್ರಸ್ಟ್ ಅಧ್ಯಕ್ಷ ಕೆ,ಪಿ ಕುಞಿ ಮೊಹಮ್ಮದ್ ,ಕಾರ್ಯದರ್ಶಿ ಪಿ.ಕೆ ಅಬ್ದುಲ್ ರೆಹಮಾನ್ ನಿರ್ದೇಶಕ ಶುಕೂರು ಚರ್ಚೆಯಲ್ಲಿ ಪಾಲ್ಗೊ‌ಡಿದ್ದರು.

Latest Indian news

Popular Stories