ಗೋಣಿಕೊಪ್ಪಲಿನಲ್ಲಿ ದಿಡೀರ್ ಕಟ್ಟಡ ಕುಸಿತ ಹಲವರು ಸಿಲುಕಿಕೊಂಡಿರುವ ಬಗ್ಗೆ ಶಂಕೆ

ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ಇಂದು ದಿಡೀರನ ಕುಸಿದು ಬಿದ್ದು ಹೊಟ್ಟೆಯಲ್ಲಿನ ಕಾರ್ಮಿಕರು, ಊಟಕ್ಕೆ ತೆರಳಿದ ಗ್ರಾಹಕರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ತೀರಾ ಶಿಥಿಲ ವ್ಯವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್ ಮತ್ತೊಂದರಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು ಇದೀಗ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅಗ್ನಿಶಾಮಕ ದಳ ಕಾರ್ಯಚರಣೆಯಿಂದ ಸಿಲುಕಿಕೊಂಡವರಲ್ಲಿ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ.ದಾಖಲಿಸಾಗಿದೆ ಇನ್ನೂ ಕೆಲವರು ಕಟ್ಟಡದ ಅಡಿ ಸಿಲುಕಿರುವ ಸಾದ್ಯತೆ ಇದೆ. ಕಾರ್ಯಚರಣೆ ಭರದಿಂದ ಸಾಗಿದೆ.

ಗೋಣಿಕೊಪ್ಪಲು ನಗರ ಪ್ರವೇಶಿಸುವ ವಾಹನ ಮಾಲಿಕರು ಹಾಗೂ ಚಾಲಕರ ಗಮನಕ್ಕೆ ವಿರಾಜಪೇಟೆ ಯಿಂದ ಬರುವ ವಾಹನಗಳು ಹೆಚ್ ಟಿ ಪೆಟ್ರೋಲ್ ಬಂಕ್ ಮುಖಾಂತರ ಬೈಪಾಸ್ ರಸ್ತೆ ಸಂಚಾರ ಮಾಡಿ, ಮೈಸೂರು ಹಾಗೂ ಪಾಲಿಬೆಟ್ಟ ರಸ್ತೆಯಿಂದ ಬರುವ ವಾಹನಗಳು ಪೊನ್ನಂಪೇಟೆ ಜಂಕ್ಷನ್ ಗಾಗಿ ಬೈಪಾಸ್ ರಸ್ತೆ ಮುಖಾಂತರ ಸಂಚರಿಸಿ.

.

Latest Indian news

Popular Stories