ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಪುತ್ರಿ ನೀಲಿಕ ಪೊನ್ನಪ್ಪ(24) ಇಂದು ಹೃದಯಾಘಾತಕ್ಕೆ ಒಳಗಾಗಿ ಮನೆಯಲ್ಲಿಯೇ ಅಸುನೀಗಿದ್ದಾರೆ.
ನೀಲಿಕಾ ಪೊನ್ನಪ್ಪ ಮಡಿಕೇರಿಯ ಕೊಡಗು ವೈದ್ಯಕೀಯ ಕಾಲೇಜು ಮತ್ತು ಭೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಬೆಳಗ್ಗೆ ಮಡಿಕೇರಿಗೆ ಎಂದಿನಂತೆ ತಮ್ಮ ಕರ್ತವ್ಯಕ್ಕೆ ತೆರಳಲು ಅಣಿಯಾಗುತ್ತಿದ್ದ ಸಮಯದಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತನ್ನ ಕೊಠಡಿಯ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾರೆ.
ತಾಯಿ ಬಂದು ನೋಡಿ ಅಕ್ಕಪಕ್ಕದವರ ನೆರವಿನಿಂದ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ
ವೈದ್ಯರು ಪರಿಶೀಲಿಸಿ ಸಾವನ್ನು ದೃಢಪಡಿಸಿದ್ದಾರೆ.
ನೀಲಿಕಾ ಅವರ ಅಗಲಿಕೆಯ ಸುದ್ದಿ ಹರಡಿದಂತೆ ಮೃತಳನ್ನು ನೋಡಲು ಗ್ರಾಮಸ್ಥರು ಮನೆ ಬಳಿ ನೆರೆದಿದ್ದಾರೆ ಎಂದು ತಿಳಿದುಬಂದಿದೆ.