ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗಿರವಿ ಅಂಗಡಿಗಳು, ಹಾಗೂ ಹಲವಾರು ಹಣಕಾಸು ಸಂಸ್ಥೆಗಳು ಸಪ್ಟೆಂಬರ್ 15 ರವರೆಗೆ ಬಾಕಿ ಇರುವ ಕಂತುಗಳನ್ನು ವಸೂಲು ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಪ್ಟಂಬರ್ 15ರ ನಂತರ ವಸೂಲಿಗೆ ಕ್ರಮ ವಹಿಸಬಹುದಾಗಿದೆ. ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದ ಕೂಲಿಕಾರ್ಮಿಕರಿಗೆ,ಕೃ ಷಿಕರಿಗೆ, ಶ್ರಮಿಕರಿಗೆ ದಿನನಿತ್ಯದ ಜೀವನ ನಡೆಸಲು ತೊಂದರೆ ಉಂಟಾಗಿದ್ದರಿಂದ ಕೆಲಸವಿಲ್ಲದೆ ಆದಾಯದಲ್ಲಿ ವೆತ್ಯವಯ ವಾಗಿದ್ದರಿಂದ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.