ಕೊಡಗು: ಅಪ್ರಾಪ್ತ ಮಗನಿಂದ ಸ್ಕೂಟಿ ಚಲಾಯಿಸಿ ಪಾದಚಾರಿ ಮೃತ್ಯು – ತಾಯಿಗೆ ನ್ಯಾಯಾಂಗ ಬಂಧನ

ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಯ ಸಾವಿಗೆ ಕಾರಣನಾದ ತಪ್ಪಿಗೆ ಸರ್ಕಾರಿ ವೀಕ್ಷಣಾಲಯಕ್ಕೆ ಸೇರಿಸಲ್ಪಟ್ಟಿದ್ದರೆ, ಈತನಿಗೆ ಸ್ಕೂಟಿಯನ್ನು ಚಲಾಯಿಸಲು ನೀಡಿದ ಪ್ರಮಾದಕ್ಕೆ ತಾಯಿ ಬಂಧನಕ್ಕೊಳಗಾಗಿದ್ದಾರೆ.


ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಳ್ಳಿ ಪಂಚಾಯತ್ ರಸ್ತೆಯಲ್ಲಿ ಜೂ. 1 ರಂದು ರಾತ್ರಿ ಸುಮಾರು 7.15ರ ಸಮಯದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯಪ್ಪ ಎಂಬುವವರಿಗೆ ಸ್ಕೂಟಿ ಡಿಕ್ಕಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜಯಪ್ಪಅವರನ್ನು ಹಾಸನದ ಎಸ್.ಎಸ್.ಎಂ. ಆಸ್ಪತ್ರೆಗೆ ದಾಖಲಿಸಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಜೂ. 2 ರಂದು ಮೃತರಾಗಿದ್ದರು. ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ 278, 304(ಎ) ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ, ಸಕಲೇಶಪುರ ತಾಲ್ಲೂಕು ಚಂಗಡಹಳ್ಳಿ ಗ್ರಾಮದ ನಿವಾಸಿಯಾದ ಕುಶಾಲ ಎಂಬುವವರ ಪತ್ನಿ ಯಶೋಧರವರ ಅಪ್ರಾಪ್ತ ವಯಸ್ಸಿನ ಮಗ ಸ್ಕೂಟಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಾದಚಾರಿಗೆ ಡಿಕ್ಕಿಪಡಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟಿಯನ್ನು ಚಲಾಯಿಸಲು ನೀಡಿದ್ದರಿಂದ, ಸ್ಕೂಟಿ ಮಾಲೀಕರೂ ಆಗಿರುವ ಯಶೋಧರವರ ವಿರುದ್ದ ಪ್ರಕರಣವನ್ನು ದಾಖಲಿಸಿ ಜೂ. 10 ರಂದು ತಾಯಿ ಮತ್ತು ಮಗ ಇವರಿಬ್ಬರನ್ನೂ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಅಪಘಾತಕ್ಕೆ ಕಾರಣವಾದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಸೋಮವಾರಪೇಟೆ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಕನೂನು ಸಂಘರ್ಷಕ್ಕೆ ಒಳಗಾದಅಪ್ರಾಪ್ತ ಬಾಲಕನಿಗೆ 11 ದಿನಗಳ ಕಾಲ ಸುಧಾರಣೆ ಸಲುವಾಗಿ ಮೈಸೂರಿನ ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸಲು ಆದೇಶಿಸಿದೆ.

Latest Indian news

Popular Stories