ಕೊಡಗು: ಬೈಕ್ ಶೋ ರೂಂ ನಲ್ಲಿ ಗಲಾಟೆ. ಯುವಕನ ದಾರುಣ ಹತ್ಯೆ

ಕುಶಾಲನಗರ: ಬೈಕ್ ಸರ್ವೀಸ್ ಗೆ ಬಂದಿದ್ದ ಗ್ರಾಹಕ‌ ಮತ್ತು ಶೋರೂಂ ಮಾಲೀಕನ ನಡುವೆ ನಡೆದ ಗಲಾಟೆಯಲ್ಲಿ ಶೋರೂಂ‌ ಮಾಲೀಕನಿಂದ ಇರಿತಕ್ಕೆ ಒಳಗಾಗಿದ್ದ ಯುವಕ ಸಾಜಿದ್ ( 22) ಮೃತಪಟ್ಟಿದ್ದಾನೆ.

ಮಡಿಕೇರಿ ಗಣಪತಿ ಬೀದಿ‌ ನಿವಾಸಿ ವೆಲ್ಡರ್ ಸಜಿದ್ ಮೃತಪಟ್ಟವನು.

ಕುಶಾಲನಗರದಲ್ಲಿ ಮೈಸೂರು ರಸ್ತೆಯಲ್ಲಿರುವ ಕೊಡಗನ ಮೋಟರ್ಸ್ ಮಾಲೀಕ ಶ್ರೀನಿಧಿ ಹಾಗೂ ಮಡಿಕೇರಿ ನಿವಾಸಿ ಸಾಜೀದ್ (23)ಎಂಬಾತನ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು ಶ್ರೀನಿಧಿ ಸಜಿದ್ ಎದೆಗೆ ಚೂಪಾದ ಆಯುಧದಿಂದ ಇರಿದಿದ್ದ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಸಜೀದ್ ನನ್ನು ಹೆಚ್ಚಿನ ಚಿಕಿತ್ಸೆಗೆ‌ ಮೈಸೂರಿಗೆ ರವಾನಿಸಲಾಗಿತ್ತು.

ಚಿಕಿತ್ಸೆ‌ ಫಲಕಾರಿಯಾಗದೆ ಸಾಜಿದ್ ಮೃತಪಟ್ಟಿದ್ದಾನೆ.

Latest Indian news

Popular Stories