ಕೆ.ಪಿ.ವಿ.ಎ ಆಕ್ಟ್ ಜಾರಿ ಹಿನ್ನಲೆ ವಕೀಲರ ಸಂಘದಿಂದ ಎ.ಎಸ್.ಪೊನ್ನಣ್ಣ ನವರಿಗೆ ಸನ್ಮಾನ

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ 2023 ( Karnataka prohibition of violence against advocates act 2023)ಜಾರಿಗೊಳಿಸಿದ ಹಿನ್ನಲೆಯಲ್ಲಿ ಈ ಕಾಯ್ದೆಯ ರುವಾರಿಗಳಲ್ಲಿ ಪ್ರಮುಖರಾದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರನ್ನು ದೊಡ್ಡಬಳ್ಳಾಪುರ ವಕೀಲರ ಸಂಘದ ಪ್ರತಿನಿಧಿಗಳು ಸನ್ಮಾನಿಸಿದರು.
ಜೊತೆಗೆ ವಕೀಲರ ಸಂಘದ ಕಛೇರಿ ಕಟ್ಟಡಕ್ಕೆ ಮನವಿಯನ್ನು ಸಲ್ಲಿಸಿದರು.

ಇಂದು ಎ.ಎಸ್.ಪೊನ್ನಣ್ಣ ನವರ ವಿಧಾನ ಸೌಧ ಕಛೇರಿಯಲ್ಲಿ ಸಂಘದ ಅಧ್ಯಕ್ಷರಾದ ರವಿ ಎಂ. ಮತ್ತು ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಮುನಿರಾಜ್,ವಿಜಯ್ ಕುಮಾರ್,ಸದಸ್ಯರಾದ ಶಿವಕುಮಾರ್,ಮಹಮದ್ ಮಮ್ತಾಜ್, ಪ್ರಭಾಕರ್,ಸೈಯದ್ ನಾಜಿಮ್,ಪ್ರವೀಣ್ ಕುಮಾರ್,ಮೋಹನ್ ಕುಮಾರ್ ರವರು ಉಪಸ್ಥಿತರಿದ್ದರು.

Latest Indian news

Popular Stories