ಕರ್ತೋಜಿ ಬಳಿ ಉಬ್ಬಿದ ಮಂಗಳೂರು-ಮಡಿಕೇರಿ ಹೆದ್ದಾರಿ – ಅಲರ್ಟ್

ಕೊಡಗು: ಮಡಿಕೇರಿ-ಮಂಗಳೂರಿನ ನಡುವಿನ ಸಂಪರ್ಕ ಸೇತುವಾದ ರಾಷ್ಟ್ರೀಯ ಹೆದ್ದಾರಿ ಕರ್ತೋಜಿ ಬಳಿ ಉಬ್ಬಿ ಕೊಂಡಿದೆ.

ಮದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ತೋಜಿ ಬಳಿ ಮಳೆಯಿಂದಾಗಿ ರಸ್ತೆಯ ಒಂದು ಬದಿ ಉಬ್ಬಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಎಚ್ಚರಿಕಾ ಫಲಕ ಅಳವಡಿಸಿದ್ದಾರೆ.

2018 ರ ಭೀಕರ ಜಲ ಪ್ರವಾಹದಿಂದ ಇದೇ ಪ್ರದೇಶದಲ್ಲಿ ಮನೆ ಮಠಗಳು ಸೇರಿದಂತೆ ರಸ್ತೆ ಸಂಪರ್ಕವನ್ನು ಕಳೆದು ಕೊಂಡು ಭಾರೀ ನಾಶ- ನಷ್ಟ ಉಂಟಾಗಿದ್ದನ್ನು ಸ್ಮರಿಸಬಹುದಾಗಿದೆ. ಕೊಡಗಿನಲ್ಲಿ ಸತತ ಮಳೆಯಾಗುತ್ತಿದ್ದು ಹಾರಂಗಿ ಡ್ಯಾಮ್ ಭರ್ತಿಯಾಗಿದೆ.

Latest Indian news

Popular Stories