Kodagu
ಪ್ರತಾಪ ಸಿಂಹ ಒಬ್ಬ ಕೀಳು ಮಟ್ಟದ ರಾಜಕಾರಣಿ – ಶಾಸಕ ಏ ಎಸ್ ಪೊನ್ನಣ್ಣ

ತನ್ನ 10 ವರ್ಷದ ಅಧಿಕಾರಾವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲವೆಂದು ಸ್ವಯಂ ಘೋಷಿಸಿಕೊಂಡ ಸಂಸದ ಪ್ರತಾಪ ಸಿಂಹ ಸ್ವಯಂ ಆತ್ಮ ಅವಲೋಕನ ಮಾಡಿಕೊಳ್ಳಲಿ ಎಂಧು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಏ ಎಸ್ ಪೊನ್ನಣ್ಣ ಮಾರ್ಮಿಕವಾಗಿ ನುಡಿದರು ,
ಅವರು ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ ಸಂಧರ್ಭ. ಪ್ರತಾಪ ಸಿಂಹರವರು ಪೊನ್ನಂಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಶಾಸಕರ ಮೇಲೆ ಆರೋಪ ಮಾಡಿದ ಬಗ್ಗೆ ಪ್ರತಿಕ್ರಿಯೆ ಬಯಸಿದಾಗ ಉತ್ತರಿಸುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರತಾಪ ಸಿಂಹರ ವಿರುದ್ಧ ತನಿಖೆ ನಡೆಸಿದರೆ ಆತ ಜೈಲಿನಲ್ಲಿರಬೇಕಿತ್ತು. ಇನ್ನು ತನಿಖೆ ನಡೆಸಿದ್ದರೆ ಬಿಜೆಪಿ ಪಕ್ಷಕ್ಕೆ ಮುಜುಗರ ಅನುಭವಿಸ ಬೇಕಾಗಬಹುದೆಂದು ಈ ಬಾರಿ ಟೆಕೆಟನ್ನು ತಪ್ಪಿಸಿ ಒಡೆಯರ್ ರವರಿಗೆ ನೀಡಿದ್ದಾರೆ, ಇದಕ್ಕಾಗಿ ಬಿಜೆಪಿ ಪಕ್ಷದ ವರಿಷ್ಠ ರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು