ಪ್ರತಿ ನಿತ್ಯ ಬಸ್ ಕಾಯುತ್ತಿದ್ದ ಗುರುವಿಗೆ ಕಾರು ಖರೀದಿಸಿ ಕೊಟ್ಟ ಶಿಷ್ಯ!

ಅಜ್ಜಿನಡ್ಕ ಆರಿಫ್ ಎಂಬ ಯುವಕನ ತಮ್ಮ ಒಂದು ದಿವಸ ಪುತ್ತೂರಿಗೆ ಹೋಗುತ್ತಿರುವಾಗ ಪುಣಚ ಮಸೀದಿಯ ಖತೀಬ್ ಉಸ್ತಾದ್ ಬಿ.ಎಂ.ಮುಹಮ್ಮದ್ ದಾರಿಮಿ ಯವರು ಬಸ್ ಗಾಗಿ ಕಾಯುತ್ತಿರುವುದನ್ನು ಈತ ನೋಡಿರುತ್ತಾನೆ. ಈತ ಮರಳಿ ಬರುವಾಗಲೂ ಕೂಡ ಉಸ್ತಾದ್ ರು ಅದೇ ಜಾಗದಲ್ಲಿ ಬಸ್ಸಿಗೆ ಕಾಯುತ್ತಿರುವುದನ್ನು ಗಮನಿಸುತ್ತಾನೆ. ಇದನ್ನು ಕಂಡು ಮನಸ್ಸು ಮರುಗಿದ ಈತ ತನ್ನ ಮನೆಗೆ ಬಂದು ಪುಣಚ ಖತೀಬ್ ಉಸ್ತಾದ್ ರು ತಾನು ಪುತ್ತೂರಿಗೆ ಹೋಗುವಾಗಲೂ ಬರುವಾಗಲು ಬಸ್ ನಿಲ್ದಾಣದಲ್ಲೇ ಇರುವ ವಿಷಯ ತಿಳಿಸುತ್ತಾನೆ.

ನಮ್ಮಲ್ಲಿ ಹಣ ಇದ್ದರೆ ಒಂದು ಸಣ್ಣ ಮೊತ್ತದ ಕಾರು ಖರೀದಿಸಿ ಕೊಡಬಹುದಿತ್ತು ಎಂದು ಮನೆಯವರಿಗೆ ತಿಳಿಸುತ್ತಾನೆ ಈತನ ಮಾತಿಗೆ ಮನೆಯವರು ಕೂಡ ಧ್ವನಿಗೂಡಿಸ್ತಾರೆ .ಮನೆಯವರಿಗೆ ಆಗ ಸಾಲ ಇದ್ದ ಕಾರಣ ಏನೂ ಮಾಡಲಾಗಲಿಲ್ಲ.ನಮ್ಮ ಸಾಲ ಸಂದಾಯ ಆದ ಬಳಿಕ ಉಸ್ತಾದ್ ರಿಗೆ ನಾವು ಕಾರು ಕೊಡುವ ಎಂಬ ಅಭಿಪ್ರಾಯಕ್ಕೆ ಬಂದರು.

ಇವರ ಸಾಲ ಮುಗಿದ ಬಳಿಕ ಸ್ವಲ್ಪ ಹಣದೊಂದಿಗೆ ಪುಣಚ ಖತೀಬ್ ಉಸ್ತಾದ್ ರ ಬಳಿ ಬಂದು ” ನೀವು ಈ ಹಣದಿಂದ ಬರುವ ಕಾರು ಖರೀದಿಸಿ ” ಎಂದು ಹೇಳಿದರು.ಆಗ ಉಸ್ತಾದ್ ರು ” ನಾನು ಜಮಾಅತ್ ಕಮಿಟಿಯವರ ಜತೆ ಮಾತನಾಡಿ ವಿಷಯ ತಿಳಿಸುತ್ತೇನೆ ಎಂದರು.ನಂತರ ಈ ವಿಷಯವನ್ನು ನಟ್ಟಿ ಅಶ್ರಫ್ ನವರಿಗೆ ವಿವರಿಸಿದರು.

ಆಗ ಮರ್ಹೂಂ ನಟ್ಟಿ ಅಂದುಂಞಿ ಹಾಜಿ ಯವರ ಮಕ್ಕಳಾದ ಅಶ್ರಫ್, ಸತ್ತಾರ್ ಮತ್ತು ಅಯ್ಯೂಬ್ ರವರು ಸೇರಿ ಅಜ್ಜಿನಡ್ಕ ಆರಿಫ್ ನ ಜೊತೆ ಮಾತುಕತೆ ನಡೆಸಿ ನಂತರ ಒಂದು ತೀರ್ಮಾನಕ್ಕೆ ಬರುತ್ತಾರೆ. ಆರಿಫ್ ನೀಡಿದ ಹ ಹಣವನ್ನು ಸೇರಿಸಿ ಒಂದು ಸಣ್ಣ ಮೊತ್ತದ ಕಾರು ಉಸ್ತಾದ್ ರಿಗೆ ಖರೀದಿಸಿ ಕೊಡುವುದಾಗಿ ಪರಸ್ಪರ ಮಾತನಾಡಿದರು.
ಕೊನೆಗೆ, ಉಸ್ತಾದ್ ರಿಗೆ ನಾವು ಹೊಸ ಕಾರನ್ನೇ ಖರೀದಿಸಿ ಕೊಡುವ ಎಂಬ ಅಭಿಪ್ರಾಯಕ್ಕೆ ಎಲ್ಲರೂ ಬಂದು ತಲುಪಿದರು.ಪುಣಚ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಮರ್ಹೂಂ ನಟ್ಟಿ ಯೂಸುಫ್ ಅವರ ಕನಸು ಕೂಡ ಇದಾಗಿತ್ತು.

ಖತೀಬ್ ಉಸ್ತಾದ್ ರಿಗೆ ಒಂದು ಕಾರು ಖರೀದಿಸಿ ಕೊಡುವ ಬಗ್ಗೆ ಅವರೂ ಮೊದಲು ಅಭಿಪ್ರಾಯಪಟ್ಟಿದ್ದರು. ಪುಣಚ ಜಮ್ಮಾತಿನ ಸದಸ್ಯರ ಕನಸು ಕೂಡ ಆಗಿತ್ತು ಪುಣಚ ಜುಮುಅಃ ಮಸ್ಜಿದ್ ನ ಖತೀಬ್ ಆಗಿ ಹಲವಾರು ವರ್ಷಗಳಿಂದ ನಿಷ್ಠಾವಂತ ಸೇವೆ ಸಲ್ಲಿಸುತ್ತಿರುವ ಬಿ.ಎಂ.ಮುಹಮ್ಮದ್ ದಾರಿಮಿ ಉಸ್ತಾದ್ ರಿಗೆ ಹೊಸ ಕಾರೊಂದನ್ನು ನೀಡುತ್ತಿರುವುದು ಪುಣಚದ ಸರ್ವರ ಸಂತೋಷಕ್ಕೆ ಕಾರಣವಾಗಿದೆ.

Latest Indian news

Popular Stories