Kodagu
ನಾಪಂಡ ಮುದ್ದಪ್ಪ ಅವರಿಗೆ ವಿಕ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕದ ನಂ೧ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕ ನೀಡುವ ವಾರ್ಷಿಕ ಪ್ರಶಸ್ತಿ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿಗೆ ಕೊಡಗು ಮೂಲದ ಉದ್ಯಮಿ ನಾಪಂಡ ಮುದ್ದಪ್ಪ ಬಾಜನರಾಗಿದ್ದಾರೆ.
ಉದ್ಯಮದ ಯಶಸ್ಸಿನೊಂದಿಗೆ ಸಮಾಜಸೇವೆಯ ತೊಡಗಿಕೊಂಡಿರುವ ಇವರ ಸೇವೆಯನ್ನು ಅಪಾರ ಗುರುತಿಸಿ ನಾಪಂಡ ಮುದ್ದಪ್ಪ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದೆ ಮೊದಲ ಬಾರಿಗೆ ಕೊಡಗಿನ ಉದ್ಯಮಿಯೊಬ್ಬರಿಗೆ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ ದೊರೆತಿದೆ.
ಶನಿವಾರ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ ಹಾಗು ಚಿತ್ರನಟಿ ತಾರಾ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.