ಕೊಪ್ಪಳ:- ಶ್ರೀಗಂಧ ಕಳ್ಳರ ಬಂಧನ.

ಕೊಪ್ಪಳ: ಜಿಲ್ಲಾದ್ಯಂತ ಶ್ರೀಗಂಧ ಮರ ಕಳ್ಳತನವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ಒಂಟಗೋಡಿ ಇವರ ನೇತೃತ್ವದಲ್ಲಿ ಹಾಗೂ ಗಂಗಾವತಿ ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ, ಹಾಗೂ ಕನಕಗಿರಿ ತಾಲೂಕಿನಲ್ಲಿ ಶ್ರೀಗಂಧ ಮರ ಕಳ್ಳತನದ ಬಗ್ಗೆ ದೂರು ಹಿನ್ನೆಲೆಯಲ್ಲಿ ನಾಲ್ಕು ಜನ ಕಳ್ಳರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಮಂಗಳವಾರದಂದು ನಡೆದಿದೆ.


ಬಂಧಿತ ಆರೋಪಿಗಳಿಂದ 3,00,000 ರೂ ಮೌಲ್ಯದ ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.


ಬಂದಿತ ಆರೋಪಿಗಳನ್ನು ವಣಿಗೇರಿ ಗ್ರಾಮದ ರಾಜಪ್ಪ ಹನಮಪ್ಪ ಭಜಂತ್ರಿ, ಮತ್ತು ಶಿವಪ್ಪ ಲಕ್ಷ್ಮಣ ಭಜಂತ್ರಿ, ಇವರನ್ನು ಬಂಧಿಸಲಾಗಿ ಆರೋಪಿತರು ಕಳ್ಳತನ ಮಾಡಿಕೊಂಡು ಹೋದ ಶ್ರೀಗಂಧ ಮರಗಳನ್ನು ದೋಟಿಹಾಳ ಗ್ರಾಮದ ಹನುಮಂತ ಬಸಪ್ಪ ಜುಮಲಾಪುರ ಇವರಿಗೆ ಮಾರಾಟ ಮಾಡಿದ್ದಾರೆ ನಂತರ ಆರೋಪಿ ಹನುಮಂತ ನು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶಶಿಕುಮಾರ ರೂಡಗಿ ಎಂಬುವವರಿಗೆ ಮಾರಾಟ ಮಾಡಿರುವುದಾಗಿ ಆರೋಪಿ ಹನುಮಂತನು ಒಪ್ಪಿಕೊಂಡಿದ್ದಾನೆ.


ಈ ಪ್ರಕರಣ ದಲ್ಲಿ ಭಾಗಿ ಆರೋಪಿಗಳಾದ ಮಂಜುನಾಥ ದೋಟಿಹಾಳ, ಚಂದ್ರಪ್ಪ ದೋಟಿಹಾಳ, ಈರಣ್ಣ ಕುಂಬಾರ ದೋಟಿಹಾಳ, ಸಣ್ಣೆಪ್ಪ ದೋಟಿಹಾಳ ಇವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ, ಪ್ರಕರಣ ಭೇದಿಸುವಲ್ಲಿ ಯಶಸ್ವಿ ಯಾದ ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ಹನುಮಸಾಗರ ಪಿಎಸ್ ಐ ಅಶೋಕ ಬೇವೂರು ಹಾಗೂ ಬಸಪ್ಪ ಎಲ್ ಟಿ, ಸಿಬ್ಬಂದಿಗಳಾದ ಎಎಸ್ ಐ ಸಿದ್ದರಾಮಪ್ಪ, ವಿರುಪಾಕ್ಷಿ, ವಸಂತ, ಮಲ್ಲಪ್ಪ ಗುಂಡಪ್ಪ, ದುರುಗಪ್ಪ ಎಎಸ್ ಐ, ಪರಶುರಾಮ ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.

Latest Indian news

Popular Stories