ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್‌ಗಳನ್ನು ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ನೀಡಿದ್ದ ಸೂಚನೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 9) ತಡೆ ನೀಡಿದೆ.
ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ. ಕಾಲೇಜಿನ ಸೂಚನೆಗಳನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಕಾಲೇಜು ವಿಧಿಸಿರುವ ಈ ಷರತ್ತಿನ ಬಗ್ಗೆ ಆರಂಭದಲ್ಲಿ ಆಶ್ಚರ್ಯ ವ್ಯಕ್ತಪಡಿಸಿತು.
“ಇದೇನು? ಇಂತಹ ನಿಯಮ ಹೇರಬೇಕಾ..ಇದೇನು? ಧರ್ಮವನ್ನು ಬಹಿರಂಗಪಡಿಸಬೇಡವೇ?” ವಿದ್ಯಾರ್ಥಿಗಳ ಧರ್ಮವನ್ನು ಬಹಿರಂಗಪಡಿಸದಂತೆ ನಿಯಮವನ್ನು ವಿಧಿಸಲಾಗಿದೆ ಎಂದು ನ್ಯಾಯಮೂರ್ತಿ ಖನ್ನಾ ಕಾಲೇಜಿನ ತರ್ಕವನ್ನು ಉಲ್ಲೇಖಿಸಿ ಕೇಳಿದರು.
“ಅವರ ಹೆಸರುಗಳು ಧರ್ಮವನ್ನು ಬಹಿರಂಗಪಡಿಸುವುದಿಲ್ಲವೇ? ನೀವು ಅವರನ್ನು ಸಂಖ್ಯೆಗಳಿಂದ ಗುರುತಿಸಲು ಕೇಳುತ್ತೀರಾ?” ಎಂದು ನ್ಯಾಯಮೂರ್ತಿ ಕುಮಾರ್ ಪ್ರಶ್ನಿಸಿದರು.
“ತಿಲಕವನ್ನು ಹಾಕಿ ಬಂದವರನ್ನೂ ಅನುಮತಿಸಲಾಗುವುದಿಲ್ಲ ಎಂದು ನೀವು ಹೇಳುತ್ತೀರಾ?” ಎಂದು ನ್ಯಾಯಮೂರ್ತಿ ಖನ್ನಾ ಅವರು ದಿವಾನ್ ಅವರನ್ನು ಪ್ರಶ್ನಿಸಿದರು.
“ಹುಡುಗಿ ಏನು ಧರಿಸಬೇಕೆಂದು ಬಯಸುತ್ತಾಳೆ?” ಎಂದು ನ್ಯಾಯಮೂರ್ತಿ ಕುಮಾರ್ ಈ ಹಂತದಲ್ಲಿ ಕೇಳಿದರು. ಜಸ್ಟಿಸ್ ಖನ್ನಾ ಅವರು “ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಹೇಗೆ ಸಬಲೀಕರಣ ಮಾಡುತ್ತಿದ್ದೀರಿ?” ಎಂದು ಖಾರವಾಗಿ ಪ್ರಶ್ನಿಸಿದರು.