ಮಾದಕ ಸೇವನೆ – ಜೀವಕ್ಕೆ ಮಾರಕ

ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ೨೬-೦೬-೨೦೨೧ ರಂದು “ಅಂತರಾಷ್ಟಿçÃಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣ ಕೆ ವಿರೋಧಿ ದಿನ” ಆಚರಣೆ ನಡೆಯಲಿದ್ದು, ಈ ವರ್ಷದ ಘೋಷಣೆ “ಮಾದಕ ವಸ್ತುಗಳ ಬಗ್ಗೆ ಸತ್ಯ ಸಂಗತಿ ಹಂಚಿಕೊಳ್ಳಿ-ಜೀವ ಉಳಿಸಿ” ಎಂಬುದಾಗಿದೆ. ಪ್ರಸ್ತುತ ಕೊವಿಡ್ ಸಮಯದಲ್ಲಿ ಮಾದಕ ವ್ಯಸನವು ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಆದುದರಿಂದ, ಜನ ಸಾಮಾನ್ಯರಲ್ಲಿ ಅದರಲ್ಲೂ ಯುವಕರಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ, ಮಾದಕ ವ್ಯಸನ ರಹಿತ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
“ವ್ಯಸನ (ಚಿಜಜiಛಿಣioಟಿ)” ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ. ವ್ಯಸನವು ಜೀವ-ವಿಜ್ಞಾನಕ್ಕೆ ಸಂಬAಧಿಸಿದ ಮಿದುಳಿನ ಅಸ್ವಸ್ಥತೆ. ಇದರ ಮೇಲೆ ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಪ್ರಭಾವ ಇರುತ್ತದೆ. ತಾತ್ಕಾಲಿಕ ಆನಂದ ನೀಡುವ ಮಾದಕ-ದ್ರವ್ಯಗಳ(ಮದ್ಯ, ಸಿಗರೇಟ್,ಡ್ರಗ್ ಇತ್ಯಾದಿ) ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು. ಇದು ದೈಹಿಕ, ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.
ವ್ಯಸನವು ಆಯ್ಕೆಯೇ?
ಕುತೂಹಲ, ಸ್ನೇಹಿತರ ಒತ್ತಡ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆAಬ ಭಾವನೆ, ಮನೆಯ ವಾತಾವರಣ, ಮನೆಯವರ ವಿರುದ್ದ ಸಿಡಿದೇಳುವ ಅಥವಾ ತಿರುಗಿ ಬೀಳುವ ಒಂದು ಕೃತ್ಯವೆಂದು ಭಾವಿಸಿ, ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವಸ್ತುಗಳ ಸೇವನೆ ಆರಂಭಿಸುತ್ತಾರೆ., ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಯಸುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ತಮ್ಮ ಮನೋಸಾಮರ್ಥ್ಯ ಕಳೆದುಕೊಳ್ಳುತ್ತಾರೆ, ಆ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ. ದೀ಼ರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ,ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು.
ವ್ಯಸನವನ್ನು ಸೂಚಿಸುವ ಇನ್ನಿತರ ಕೆಲವು ಸೂಚಕಗಳು:-
೧)ಬಯಕೆ:-ಮಾದಕ ವಸ್ತುಗಳನ್ನು ತಗೆದುಕೊಳ್ಳುವ ತೀವ್ರವಾದ ಬಯಕೆ.
೨)ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲು ಯೋಚಿಸುತ್ತಿದ್ದರೆ:- (ನಾನು ಮತ್ತೆ ಯಾವಾಗ ಕುಡಿಯುತೇನೆ /
ಧೂಮಪಾನ ಮಾಡುತ್ತೇನೆ. ಇದರ ಬದಲಿಗೆ ಏನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ? ಇತ್ಯಾದಿ
ಚಿಂತನೆಗಳು)
೩)ವಿತ್ ಡ್ರಾವಲ್‌ಲಕ್ಷಣಗಳು (Withdrawal symptoms)- ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು
ಸೇವಿಸದೇ ಇದ್ದಾಗಿ ಅವರಲ್ಲಿ ನಡುಕ, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ, ಮಾನಸಿಕ ಹಾಗೂ ಭಾವನಾತ್ಮಕ ಅಂಶಗಳ
ಮೇಲೆ ಪರಿಣಾಮ ಬೀರುತ್ತದೆ.
೪)ನಿಯಂತ್ರಣದ ಕೊರತೆ:- ಇಡೀದಿನ ಮಾದಕ ವಸ್ತುಗಳನ್ನು ತೆಗೆದುಕೊಳ್ಳದೇ ಇರಬೇಕೆಂದು ನಿರ್ಧರಿಸಿ, ಅದಕ್ಕೆ ಬದ್ದರಾಗದೆ
ವಿಫಲವಾಗುವುದು.

೫)ನಿರಂತರ ಸೇವನೆಯಿಂದ ತನಗೆ ಹಾಗೂ ಸುತ್ತ-ಮುತ್ತಲಿನವರಿಗೆ ತೊಂದರೆಯಾಗುವುದನ್ನು ತಿಳಿದಿದ್ದೂ ಅದನ್ನು ಮುಂದುವರಿಸುವುದು.
ವ್ಯಸನಕ್ಕೆ ಚಿಕಿತ್ಸೆ:
೧)“ಆಪ್ತ-ಸಮಾಲೋಚನೆ(Counselling)”
ಮಾದಕ ಸೇವನೆಯಿಂದ ಹೊರಬರುವ ಮೊದಲ ಹೆಜ್ಜೆಯೆಂದರೆ ನಿಮಗೆ ತೊಂದರೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಸಹಾಯ ಪಡೆಯುವುದು. ವ್ಯಸನವು ಮಧುಮೇಹ ಅಥವಾ ಅಧಿಕರಕ್ತ ದೊತ್ತಡದಂತೆ ನಿರಂತರವಾಗಿ ಕಾಡುವ, ಮತ್ತೆ ಮರುಕಳಿಸಬಹುದಾದ ಅಸ್ವಸ್ಥತೆ. ಚಿಕಿತ್ಸೆಯ ನಂತರ ವ್ಯಸನ ಮರುಕಳಿಸಿತು ಎಂದರೆ ಚಿಕಿತ್ಸೆ ವಿಫಲಾಯಿತೆಂದಲ್ಲ ಬದಲಿಗೆ ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯದ ಅಗತ್ಯವಿದೆ ಎಂದರ್ಥ.
೨) ಔಷಧಿಗಳ ಚಿಕಿತ್ಸೆ.
೩) ಔದ್ಯೋಗಿಕ ಪುನರ್ವಸತಿ ಚಿಕಿತ್ಸೆ.
೪) ಅನುಸರಣಾ ಚಿಕಿತ್ಸೆ.

                         ಡಾ|| ಮನೋಹರ್ ವೈ ಪತ್ತಾರ್               
                         ಮನೋವೈದ್ಯರು ಡಿ,ಎಂ,ಎಚ್,ಪಿ                                   
                            ರಾಯಚೂರು

ರೋಗಿಯು ಮದ್ಯವನ್ನು ಬಳಸದಂತೆ ತಡೆಯುವುದು ಮತ್ತು ಮದ್ಯಮಾದಕ ವ್ಯಸನ ಮುಕ್ತರಾಗಿ, ಅವರು ಇಚ್ಚಿಸಿದ ಹೊಸ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಎಲ್ಲಾ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಾದಕ ವ್ಯಸನಿಗಳಿಗೂ ಉಚಿತಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಮಾಡಲಾಗುತ್ತದೆ.
ಡಾ|| ನಂದಿತಾ ಎಂ.ಎನ್
ಜಿಲ್ಲಾ ಕಾರ್ಯಕ್ರಮ ಅನುಷ್ಠಾಣಾಧಿಕಾರಿಗಳು

Latest Indian news

Popular Stories

error: Content is protected !!