ಜೂ.೫ ರಂದು ಗೂಗಲ್ ಮೀಟ್ ಮೂಲಕ ಪರಿಸರ ದಿನಾಚರಣೆ

ಮಡಿಕೇರಿ ಜೂ.೨ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ವತಿಯಿಂದ ರಂದು ‘ವಿಶ್ವ ಪರಿಸರ ದಿನಾಚರಣೆ’ ಪ್ರಯುಕ್ತ ಜೂನ್ ೫ ಸಂಜೆ ೫ ಗಂಟೆಗೆ ಗೂಗಲ್ ಮೀಟ್ ಮೂಲಕ ಪರಿಸರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿರಾಜಪೇಟೆಯ ಹೆಸರಾಂತ ವೈದ್ಯರು ಆದ ಪಕ್ಷಿತಜ್ಞ ಡಾ ಎಸ್.ವಿ.ನರಸಿಂಹನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಸ್ಲೈಡ್ ಪ್ರದರ್ಶನದ ಮೂಲಕ “ಪರಿಸರ ಮತ್ತು ಜೀವಿ ವೈವಿಧ್ಯ ಸಂರಕ್ಷಣೆ” ಎಂಬ ವಿಷಯದ ಕುರಿತು ವಿಷಯ ಮಂಡಿಸಲಿದ್ದಾರೆ. ನಂತರ ಕೇಳುಗರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ತಿಳಿಸಿದ್ದಾರೆ.
ಈ ಸಂವಾದದಲ್ಲಿ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕಾರ್ಯಕ್ರಮ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ಬಳಗದ ನಿರ್ದೇಶಕ ಎಸ್.ಐ.ಮುನೀರ್ ಅಹ್ಮದ್ ಇತರರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ (೯೪೪೮೩೪೬೨೭೬) ಅಥವಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್ (೯೪೪೮೫೮೮೩೫೨) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Latest Indian news

Popular Stories

error: Content is protected !!