ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಮಡಿಕೇರಿ:ದಿನ ನಿತ್ಯದ ವ್ಯವಹಾರದ ಮಧ್ಯೆ ಆರೋಗ್ಯವೇ ಭಾಗ್ಯ ಎನ್ನುವುದನ್ನು ‌ಮರೆಯಬಾರದು ಎಂದು ಕೊಡಗು ಪ್ರೆಸ್ ‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೊಷಕ ಜಿ. ರಾಜೇಂದ್ರ ಹೇಳಿದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಅಶ್ವಿನಿ ಆಸ್ಪತ್ರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಯೋಗ್ ಆಸ್ಪತ್ರೆ, ವಾಕ್ ಮತ್ತು ಶ್ರವಣ ಇನ್ ಪ್ಲಾಂಟ್ ಕ್ಲಿನಿಕ್ ಹಾಗೂ ಜಸ್ಟೀಸ್ ಕೆ.ಎಸ್. ಹೆಗಡೆ ಸ್ಮಾರಕ ದಂತ ವಿಭಾಗದ ಸಹಯೋಗದಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಶನಿವಾರ
ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.


ನಮ್ಮ ಆರೋಗ್ಯಕ್ಕೆ ಪ್ರಥಮ ಆದ್ಯತೆ ‌ಕೊಡಬೇಕು. ಕ್ಯಾನ್ಸರ್‌ ‌ನಂತಹ ಕಾಯಿಲೆಗಳನ್ನು ಮೂಲದಲ್ಲೇ ಗುಣಪಡಿಸಬಹುದು ಎಂದ ಅವರು ಸರ್ವೇಜನಃ ಸುಖಿನೋಭವತು ಎನ್ನುವುದು ಕೊರೊನಾ ಸಮಯದಲ್ಲಿ ಹೆಚ್ಚು ಪ್ರಸ್ತುತವಾಯಿತು. ಇಂತಹ ಶಿಬಿರಗಳ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದರು.


ಅಶ್ವಿನೀ ಆಸ್ಪತ್ರೆ ಕಾರ್ಯದರ್ಶಿ ಕುಪ್ಪಂಡ ರಾಜಪ್ಪ ಮಾತನಾಡಿ, ಸೇವೆಗಾಗಿಯೇ ಇರುವ ಆಸ್ಪತ್ರೆ ಅಶ್ವಿನೀ ಆಸ್ಪತ್ರೆ ಈಗ ಆಸ್ಪತ್ರೆ ಪ್ರಗತಿ ಸಾಧಿಸುತ್ತಿದೆ. 100 ಹಾಸಿಗೆಗಳ ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರುತ್ತಿದೆ. ಹೃದ್ರೋಗ, ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಚಿಕಿತ್ಸೆ ಕೊಡುವ ಸಿದ್ಧತೆ ನಡೆಸಲಾಗುತ್ತಿದೆ. ಜನರಲ್ಲಿ ಬೌದ್ಧಿಕ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮ ಮಾಡಬೇಕು ಎಂದೂ ಹೇಳಿದರು.


ಸ್ತ್ರೀ ರೋಗ ತಜ್ಞ ಡಾ. ಪವನ್ ಭಾರ್ಗವ್ ಮಾತನಾಡಿ, ನಾವು ಆರೋಗ್ಯವಾಗಿ ಇದ್ದೇವೆ ಅಂದುಕೊಂಡು ಜೀವನ ನಡೆಸುತ್ತಿರುತ್ತೇವೆ. ಆದರೆ ಕಾಯಿಲೆಗಳು ಕೈಮೀರಿ ಹೋಗಿ ತೊಂದರೆ ಆಗುವ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಜನಮುಖಿ, ಸಮಾಜಮುಖಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸಲು ಸಿದ್ದತೆ ನಡೆಸಲಾಗುತ್ತಿದೆ.
ಅರೋಗ್ಯ ಸೇವೆ ವ್ಯಾಪಾರೋದ್ಯಮ ಆಗಿರುವ ಇಂದಿನ ದಿನಗಳಲ್ಲಿ ಅಶ್ವಿನೀ ಆಸ್ಪತ್ರೆ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.


ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಜೇರುಸ್ ಥಾಮಸ್ ಅಲೆಕ್ಸಾಂಡರ್, ಸುಯೋಗ ಆಸ್ಪತ್ರೆಯ ಡಾ. ರಾಘವೇಂದ್ರ ಮಾತನಾಡಿದರು. ದಂತವೈದ್ಯೆ ಡಾ. ಅನುಶ್ರೀ ವೇದಿಕೆಯಲ್ಲಿ ಇದ್ದರು.
ಪ್ರೆಸ್ ಕ್ಲಬ್ ನಿರ್ದೇಶಕ ದಿವಾಕರ್ ಜಾಕಿ ಕಾರ್ಯಕ್ರಮ
ನಿರೂಪಿಸಿದರು‌. ಬೆಳ್ಳಿ ಮಹೋತ್ಸವ ಆರೋಗ್ಯ ಸಮಿತಿ ಸಂಚಾಲಕ ಎಂ. ಅಬ್ದುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕ ಭಪ್ರಾರ್ಥಿಸಿದರು.ಪ್ರತೀಕ್ಷಾ ಬಿ.ವಿ. ಪ್ರಾರ್ಥಿಸಿದರು.ವಾಕ್ ಮತ್ತು ಶ್ರವಣ ಇನ್‌ಪ್ಲಾಂಟ್ ಕ್ಲಿನಿಕ್‌‌ನ
ಡಾ. ದಿವ್ಯಜ್ಯೋತಿ ವಂಧಿಸಿದರು.

Latest Indian news

Popular Stories