ಕೊಡಗು ಪ್ರವಾಹ ಪೀಡಿತರಿಗೆ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಪೀಪಲ್ಸ್ ಫೌಂಡೇಷನ್ ವತಿಯಿಂದ 25 ಮನೆ ಹಸ್ತಾಂತರಕ್ಕೆ ಸಿದ್ಧತೆ

ಸಿದ್ದಾಪುರ: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ಹಾಗೂ ಪೀಪಲ್ಸ್ ಫೌಂಡೇಷನ್ ವತಿಯಿಂದ 2019 ರ ಪ್ರವಾಹದಲ್ಲಿ ಮನೆ ಕಳೆದುಕೊಂಡ 25 ಕುಟುಂಬಕ್ಕೆ ಮನೆ ಹಸ್ತಾಂತರಿಸುವ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

IMG 20230218 WA0019 Madikeri


ನೆಲ್ಯಹುದಿಕೇರಿಯ ಕಾಫಿಯಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಲ್ ಸಲಾಂ, 2019 ರ ಪ್ರವಾಹದಲ್ಲಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದಲ್ಲಿ ಸುಮಾರು 400 ಕ್ಕೂ ಅಧಿಕ ಮನೆಗಳು ನೆಲಸಮವಾಗಿತ್ತು. ಆ ಸಂದರ್ಭ ಹೆಚ್.ಆರ್.ಎಸ್ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ತಾತ್ಕಾಲಿಕ ಶೆಡ್ ನಿರ್ಮಾಣ, ಮನೆಗಳು ಶುಚಿತ್ವ ಕಾರ್ಯ, ಆಹಾರ ಕಿಟ್ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಈ ಸಂದರ್ಭ ಕಡು ಬಡತನದಲ್ಲಿರುವ 50 ಕುಟುಂಬಗಳಿಗೆ ಮನೆ ನಿರ್ಮಿಸಬೇಕೆಂಬ ಆಶಯ ಹೊಂದಿತ್ತು. ಕೇರಳದ ಪೀಪಲ್ಸ್ ಫೌಂಡೇಷನ್ ಸಹಕಾರದೊಂದಿಗೆ ನೆಲ್ಯಹುದಿಕೇರಿ ಗ್ರಾಮದ ನಲ್ಯತ್ತೇಕ್ರೆ ಎಂಬಲ್ಲಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಜಾಗ ಖರೀದಿಸಿದ್ದು, ಇದೀಗ 25 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದರು. ಮನೆಗಳ ಹಸ್ತಾಂತರವನ್ನು ಮಾರ್ಚ್ 13 ರಂದು ನಡೆಸಲು ಉದ್ದೇಶಿಸಲಾಗಿದ್ದು, ಸ್ವಾಗತ ಸಮಿತಿ ರಚನೆಯೊಂದಿಗೆ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಮಾಡುವಂತಾಗಬೇಕು ಎಂದರು.


ಹೆಚ್.ಆರ್.ಎಸ್ ಜಿಲ್ಲಾ ಮೇಲ್ವೀಚಾರಕರಾ ಅಬ್ದುಲ್ ರಹಮಾನ್ ಮಾತನಾಡಿ, ಈಗಾಗಲೇ ಬಡಾವಣೆಗೆ ಪೀಪಲ್ಸ್ ವಿಲೇಜ್ ಎಂದು ನಾಮಕರಣ ಮಾಡಲಾಗಿದ್ದು, ಸ್ಥಳೀಯರು ಹಾಗೂ ಮುಖಂಡರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.


ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಸಲಾಂ, ಗೌರವ ಅಧ್ಯಕ್ಷರಾಗಿ ಅಬ್ದುಲ್ ಮಜೀದ್, ಡಾ.ಸತೀಶ್ ಮಲ್ಲಯ್ಯ, ಎ.ಕೆ ಹಕ್ಕೀಂ, ಉಪಾಧ್ಯಕ್ಷರಾಗಿ ಕೆ.ಎನ್ ವಾಸು, ಜೋಸೆಫ್ ಶ್ಯಾಂ, ಪಿ.ಪಿ ಉಮ್ಮರ್ ಹಾಜಿ, ಎ.ಎನ್ ರವಿ ಉತ್ತಪ್ಪ, ಬೀರಾನ್ ಕುಟ್ಟಿ, ಪ್ರಧಾನ ಕಾರ್ಯದರ್ಶಿ ಪಿ.ಕೆ ಅಬ್ದುಲ್ ರೆಹಮಾನ್ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಮಡಿಕೇರಿ, ಎಂ.ಎ ಅಜೀಜ್, ರೆಜಿತ್ ಕುಮಾರ್, ಕೆ.ಮೊಹಮ್ಮದ್, ರಜಾಕ್, ಇಸ್ಮಾಯಿಲ್ ಕಂಡಕ್ಕರೆ ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ುಪ ಸಮಿತಿಗಳನ್ನು ರಚಿಸಲಾಯಿತು.


ಬಳಿಕ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಅತಿಥಿಗಳ ಆಹ್ವಾನ ಮುಂತಾದವುಗಳ ಬಗ್ಗೆ ಚರ್ಚಿಸಲಾಯಿತು.

Latest Indian news

Popular Stories