ಕೊಡಗು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಏಳು ಮಂದಿಯ ಬಂಧನ

ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟ/ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬಿ.ಎಸ್.ಶಿವರುದ್ರಪ್ಪ, ಸಿಪಿಐ, ವಿರಾಜಪೇಟೆ ವೃತ್ತ ಮತ್ತು ಮಂಜುನಾಥ.ಸಿ.ಸಿ, ಪಿಎಸ್ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು

ಜುಲೈ 26 ರಂದು ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ

1) ರಶೀದ್, 23 ವರ್ಷ, ಅರೇಕಾಡು, 2) ಹೆಚ್.ಆರ್ ಸುದೀಶ್, 23 ವರ್ಷ, ಒಂಟಿಯಾಂಗಡಿ, 3) ಇಮ್ರಾನ್ ಖಾನ್, 35 ವರ್ಷ, ಕೆಸಿಪಿ ಕಾಲೋನಿ, ಮೈಸೂರು, 4) ಎಂ.ಪ್ರಕಾಶ್, 24 ವರ್ಷ, ಮುರ್ತಾಮುಡಿ, 5) ಹೆಚ್.ಎಂ.ಶಾಂತಕುಮಾರ್, 27 ವರ್ಷ, ಚೇರಂಬಾಂಣೆ, 6) ಎಸ್.ಎಂ.ಸಜೀರ್, 37 ವರ್ಷ, ಕಡಗದಾಳು, 7) ಎಂ.ಇ.ನಿಯಾಜ್, 35 ವರ್ಷ, ಕಡಗದಾಳು, 8) ಇಮ್ರಾನ್ ಖಾನ್, 46 ವರ್ಷ, ಶಾಂತಿನಗರ, ಮೈಸೂರು ಎಂಬುವವರನ್ನು 1 ಕೆ.ಜಿ 243 ಗ್ರಾಂ ಗಾಂಜಾ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈ ಗೊಳ್ಳಲಾಗಿದೆ ಕೈಗೊಳ್ಳಲಾಗಿದೆ.

ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಮಡಿಕೇರಿ ರವರು ಶ್ಲಾಘಿಸಿದ್ದಾರೆ
*

Latest Indian news

Popular Stories