ತೆರೆದ ಬಾವಿಗೆ ಬಿದ್ದು ಮೃತಪಟ್ಟ 3 ವರ್ಷದ ಮಗು

ಕೊಡಗು: ಬಲೂನ್ ಹಿಡಿದು ಆಟವಾಡುತ್ತಿದ್ದ ಸಂದರ್ಭದಲ್ಲಿ ತೆರೆದ ಬಾವಿಗೆ ಬಿದ್ದು ಮೂರು ವರ್ಷ ಮಗು ಮೃತಪಟ್ಟ ಘಟನೆಯೊಂದು ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ಬುಧವಾರ (ಮೇ 10) ದಂದು ನಡೆದಿದೆ.

ರೋಶನ್ ಎಂಬವರ ಪುತ್ರಿ ಸಿಯಾನ್(3) ಮೃತಪಟ್ಟ ಮಗು. ಮಗು ಬಲೂನ್ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಮಗುವಿನ ಕೈಯಲ್ಲಿದ್ದ ಬಲೂನ್ ತೆರೆದ ಬಾವಿಗೆ ಬಿದ್ದಿದೆ. ಈ ವೇಳೆ ಏನನ್ನೂ ಅರಿಯದ ಪುಟ್ಟ ಕಂದಮ್ಮ ಬಾವಿಯಲ್ಲಿ ಬಿದ್ದ ಬಲೂನ್ ತೆಗೆಯಲು ಬಗ್ಗಿ ನೋಡಿದಾಗ ಬಾವಿಯೊಳಗೆ ಬಿದ್ದು ಮೃತಪಟ್ಟಿದೆ.

ಈ ವೇಳೆ ಮಗುವಿನ ಪೋಷಕರು ಮನೆಯ ಒಳಗಿದ್ದರು. ಮಗು ಮನೆಯ ಹೊರಗೆ ಆಟವಾಡುತ್ತಿದ್ದಳು. ಇದೀಗ ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Latest Indian news

Popular Stories