ಭಿನ್ನ ದ್ವನಿ ಮಾಡದೇ ಏಕ ದ್ವನಿಯಿಂದ ಕಾರ್ಯನಿರ್ವಹಿಸಬೇಕು – ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್

ಭಿನ್ನ ದ್ವನಿ ಮಾಡದೇ ಏಕ ದ್ವನಿಯಿಂದ ಕಾರ್ಯನಿರ್ವಹಿಸಬೇಕು.ಒಂದು ಸಂಘ ಅಂದಾಗ ಪರ, ವಿರೋಧಗಳು ಬರುವಂತದ್ದು ಸಹಜ..ಅದನ್ನು ಸರಿಪಡಿಸಿಕೊಂಡು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು ಹೊರತು ಅದನ್ನು ಇನ್ನೊಬ್ಬರೊಂದಿಗೆ ಚರ್ಚಿಸಿ ಗೊಂದಲಕ್ಕೆ ಅವಕಾಸ ಮಾಡಬಾರದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಹೇಳಿದರು.

ಅವರು ಇಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ಕನ್ನಡ ತಾಲ್ಲೂಕು ಪರಿಷತ್ತು ಇದರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದ ನಂತರ ಮಾತನಾಡುತ್ತಿದ್ದರು..ಮುಂದುವರಿದು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಮಹಿಳೆಯರು ವಹಿಸಿವ ಕಾಲ ದೂರವಿಲ್ಲ. ನಮ್ಮ ಜಿಲ್ಲೆಯ ಮಹಿಳಾ ಸಾಹಿತಿಗಳು ನೀಡಿದ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವವರಾಗಿದ್ದಾರೆ ಅವರು.ಕರ್ನಾಟಕ್ಕೆ ರಾಜ್ಯಕ್ಕೆಮಾದರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್
ಡಾ] ಶ್ರೀಧರ್ ಹೆಗಡೆ .ಪ್ರಾಧ್ಯಾಪಕರು ಎಫ್.ಎಮ್ ಸಿ ಕಾಲೇಜು. ಮಡಿಕೇರಿ ಸಮಾರಂಭವನ್ನು ಉದ್ಘಾಟಿಸಿ ಸಲಹೆಯನ್ನು ನೀಡಿದರು.ಮುಖ್ಯ ಅತಿಥಿಗಳಾಗಿ ಗೌರವ ಕಾರ್ಯದರ್ಶಿಗಳಾದ ಎಸ್ ಐ ಮುನೀರ್ ಅಹಮದ್, ರೇವತಿ ರಮೇಶ್ ಉಪಸ್ಥಿತರಿದ್ದರು..ಇದೇ ಸಂಧರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ಕಡ್ಲೇರ ತುಳಸಿ ಮೋಹನ್ ರವರಿಗೆ ನಿಕಟ ಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್ ರವರು ಅಧಿಕಾರ ಹಸ್ತಾಂತರಿಸಿದರು

Latest Indian news

Popular Stories