ಮಡಿಕೇರಿಯಲ್ಲಿ ಸುಟ್ಟು ಕುರುಕಲಾದ ಪರ್ನಿಚರ್ ಗೋಡಾನ್

ಮಡಿಕೇರಿ.
ಕೈಗಾರಿಕಾ ಬಡಾವಣೆಯ ಪ್ರಶಾಂತ್ ಫರ್ನಿಚರ್ ಮಾಲಕತ್ವದ ಮಿಲ್ ಒಂದು ತಡ ರಾತ್ರಿ ಸುಮಾರು 2’ಗಂಟೆಗೆ ಆಕಸ್ಮಿಕ ಬೆಂಕಿಯಿಂದಾಗಿ ಕಟ್ಟಡ ಹಾಗೂ ಯಂತ್ರಗಳು ಸೇರಿದಂತೆ ಬೆಲೆಬಾಳುವ ಮರದ ತುಂಡುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ..
. ಇಬ್ಬರು ಕಾರ್ಮಿಕರ ರಕ್ಷಣೆ
ಉತ್ತರ ಭಾರತ ಮೂಲದ ಕಾರ್ಮಿಕರಾದ ಇಬ್ಬರು ಯವಕರು ಎಂದಿನ ಕೆಲಸ ಮುಗಿಸಿ ಅದೇ ಕಟ್ಟಡದ ಮೇಲಿನ ಕೋಣೆಯೊಂದರಲ್ಲಿ ನಿದ್ರಿಸಿದ್ದರು.. ಸುಮಾರು 3 ಗಂಟೆಯ ಹೊತ್ತಿನಲ್ಲಿ ದಟ್ಟ ಹೊಗೆ ಹಾಗೂ ಬೆಂಕಿಯ ಕಮಟು ವಾಸನೆಗೆ ಪಕ್ಕದ ಖಾಸಾಗಿ ಆಸ್ಪತ್ರೆಯ ಕಾರ್ಮಿಕರು ಗಮನಿಸಿದಾಗ ಬೆಂಕಿಯ ಜ್ವಾಲೆಗಳು ಕಟ್ಟಡವನ್ನು ಆವರಿಸಿಯಾಗಿತ್ತು..ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಎಚ್ಚರಗೊಂಡಿದ್ದ ಇಬ್ಬರು ಕಾರ್ಮುಕರು ಹೊರಬರಲಾಗದೆ ಜೀವ ರಕ್ಷಣೆಗಾಗಿ ಕಿಡಕಿಯೊಂದ ಸರಳನ್ನು ಮುರಿದು ಹೊರಬರಲು ಪ್ರಯತ್ನಿಸಿದರೂ ಯಶಸ್ವಿಯಾಗದೇ ಅಸಹಯಾಕರಾಗಿದ್ದ ಅವರನ್ನು ಪೋಲಿಸರು ಬಂದು ರಕ್ಚಸಿದರು..
ಅಗ್ನಿಶಾಮಕ ಶಾಮಕ ದಳದ ಕಾರ್ಯಾಚರಣೆ
ಮಾಹಿತು ಅರಿತು ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದಷ್ಟು ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಗಿ ಅಕ್ಕ ಪಕ್ಕದ ಕಟ್ಟಡಗಳಿಗೆ ವ್ಯಾಪಿಸುವ ಲಕ್ಷಣ ಕಂಡು ಬರತೊಡಗಿತು ಕುಶಾಲನಗರ ಹಾಗೂ ಪಕ್ಕದ ಪಿರಿಯಾಪಟ್ಟಣದ ಅಗ್ನಿ ಶಾಮಕ ದಳಗಳು ನೆರವಿಗಾಗಿ ದಾವಿಸಿತು. ಅಪರಾಹ್ನ ಎರಡು ಗಂಟೆಯವರೆಗೂ ಬೆಂಕಿಯನ್ನು ನಂದಿಸುವ ದೃಶ್ಯ ಕಂಡು ಬರುತ್ತಿತ್ತು..
ಕೋಟಿಗಟ್ಟಲೆ ನಷ್ಟ!
ಮಾಲಿಕ ಪ್ರಶಾಂತ್ ಮಾತನಾಡಿ ಈ ಹಿಂದೆಯು ಒಂದು ಬಾರಿ ಬೆಂಕಿ ತಗುಲಿತ್ತು ಆದರೆ ಇಷ್ಟೊಂದು ವ್ಯಾಪಕವಾಗಿ ನಷ್ಟ ಆಗಿರಲಿಲ್ಲ..ಆದರೆ ಈ ಬಾರಿ ಸುಮಾರು 3 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ..ಅತ್ಯಾಧುನಿಕ ಯಂತ್ರಗಳು.ಸಾಮಾಗ್ರಿಗಳು, ಬೆಲೆಬಾಳುವ ಉನ್ನತ ಮರಮುಟ್ಟುಗಳು ಸಂಪೂರ್ಣ ಕರಕಲಾಗಿದೆ ..ಈ ಬಗ್ಗೆ ಪೋಲಿಸ್ ದೂರು ಮೀಸಲಾಗಿದೆ ಎಂದು ತಿಳಿಸಿದರು..