ಮಡಿಕೇರಿ: ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ನಾಮಪತ್ರ ಸಲ್ಲಿಕೆ


ಮಡಿಕೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಾಸಕ ಅಪ್ಪಚ್ಚು ರಂಜನ್ ನಾಮಪತ್ರ ಸಲ್ಲಿಸಿದ್ದಾರೆ.


ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಮಾಡಿದ ನಂತರ ನಗರದ ಮುಖ್ಯಬೀದಿಗಳಿಗಾಗಿ ಜಿಲ್ಲಾಡಳಿತ ಭವನದ ಗೇಟ್ವರೆಗೆ ಬೃಹತ್ ಮೆರವಣಿಗೆ ನಡೆಸಿದರು.


ಮಡಿಕೇರಿಯಲ್ಲಿ ರೋಡ್ ಶೋ ಮೂಲಕ ಅಪ್ಪಚ್ಚು ರಂಜನ್ ಶಕ್ತಿ ಪ್ರದರ್ಶನ ನಡೆಸಿದರು.ಮೆರವಣಿಗೆಯಲ್ಲಿ ಅಪಾರ ಸಂಖ್ಯೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು‌. ಪಕ್ಷದ ಬಾವುಟ ಹಿಡಿದು ಘೋಷಣೆಗಳೊಂದಿಗೆ ಸಾಗಿದ ಕಾರ್ಯಕರ್ತರು ಬಳಿಕ ಚುನಾವಣಾಧಿಕಾರಿಗೆ ನಾಮಪತ್ರ ಅಪ್ಪಚ್ಚು ರಂಜನ್ ನಾಮಪತ್ರ ಸಲ್ಲಿಸಿದರು ‌

Latest Indian news

Popular Stories