ಮಡಿಕೇರಿ : ಪ್ರಸಕ್ತ (2022-23) ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ ಸಾಮಾನ್ಯ ರೈತರಿಗೆ ಶೇ.75ರ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ.
90 ರ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆದ್ದರಿಂದ ರೈತರು ಆರ್ಟಿಸಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಮೀಪದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಗೆ ಮುದ್ದಾಂ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ ನೋಂದಾಣಿ ಮಾಡಿಕೊಳ್ಳಲು ಕೋರಿದೆ. ಹಾಗೂ ರೈತರ ವಂತಿಕೆಯನ್ನು ಇಲಾಖಾ ಅನುಮೋದಿತ ತಾವು ಆಯ್ಕೆ ಮಾಡಿ ಸಂಬಂಧಪಟ್ಟ ಹನಿ ನೀರಾವರಿ ಕಂಪನಿಗಳಿಗೆ ಸಂದಾಯ ಮಾಡಿ ಇಲಾಖೆಯಿಂದ ಕಾರ್ಯದೇಶ ಪಡೆದು ಈ ಯೋಜನೆಯನ್ನು ತಮ್ಮ ತಾಕುಗಳಲ್ಲಿ ಅಳವಡಿಸಿ ಸಹಾಯಧನ ಪಡೆಯಲು ಸಂಪೂರ್ಣ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಮಾರ್ಚ್, 15 ರೊಳಗೆ ಸಲ್ಲಿಸಿ ಸಹಾಯಧನ ಪಡೆಯುವಂತೆ ತೋಟಗಾರಿಕೆ ಉಪ ನಿರ್ದೇಶಕರಾದ ನಾಯಕ್ ಅವರು ತಿಳಿಸಿದ್ದಾರೆ.