ಕಾಂಗ್ರೆಸ್ ಶಾಸಕ ರವಿ ಗಣಿಗ ವಿರುದ್ಧ ‘ಮಾನಹಾನಿ’ ಕೇಸ್ ಹಾಕುತ್ತೇನೆ: ಮಾಜಿ ಸಚಿವ ಪುಟ್ಟರಾಜು

ಮಂಡ್ಯ: ರಾಜ್ಯಸಭಾ ಎಲೆಕ್ಷನ್ ವಿಚಾರದಲ್ಲಿ ಕೈ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆ ಆರೋಪ ಹಿನ್ನಲೆಯಲ್ಲಿ ಮಂಡ್ಯದ ಕೈ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದು,ಕೋಟಿಗಟ್ಟಲೇ ಮಾನಹಾನಿಯ ಕೇಸ್ ದಾಖಲಿಸುವುದಾಗಿ ಪುಟ್ಟರಾಜು ಹೇಳಿಕೆ ನೀಡಿದ್ದಾರೆ

ಮಂಡ್ಯ ಜಿಲ್ಲೆಯ ಕೆ‌.ಆರ್‌.ಪೇಟೆ ತಾಲೂಕಿನ ಹರಿಹರಪುರದಲ್ಲಿ ಶಾಸಕ ರವಿಕುಮಾರ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಅವರು ಆತ ಇದ್ದಾರಲ್ಲ ಮಂಡ್ಯ ಶಾಸಕ ಆತನಿಗೆ ಶಾಸಕ ಸ್ಥಾನ ಸಿಕ್ಕಿರೋದು ಪೂರ್ವ ಜನ್ಮದ ಪುಣ್ಯ.ಅದನ್ನ ಹೆಂಗೆ ಉಳಿಸಿಕೊಂಡು ಕೇಮೇ ಮಾಡಬೇಕು ಅದನ್ನ ಮಾಡೋದನ್ನ ಕಲೀಲೀ.ಎಂದು ಕಿಡಿ ಕಾರಿದ್ದಾರೆ.

ಈ ತರಹದ ಲಘುವಾದ ಮಾತುಗಳು ಆರೋಪಗಳನ್ನು ಮಾಡೋದನ್ನ ಬಿಡಲಿ.ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ.ಈ ಆರೋಪಕ್ಕೆ ಆತ ಎಷ್ಟು ಕೋಟಿಗೆ ಮಾನನಷ್ಟ ಎದುರೀಸಬೇಕಾಗುತ್ತದೆ ಅನ್ನೋದನ್ನ ತೋರೀಸ್ತಿನಿ. ಇನ್ನೆರಡು ದಿನದಲ್ಲಿ ಆತನ ವಿರುದ್ದ ಡೆಫರ್ಮೇಶನ್ ಕೇಸ್ ದಾಖಲಿಸ್ತೀನಿ ಎಂದು ವಾಗ್ದಾಳಿ ನಡೆಸಿದ್ದಾರೆ.

Latest Indian news

Popular Stories