ಮಧುರೈ: ಅದು 27 ವರ್ಷದ ಹಳೇ ಕೇಸ್. ಪೊಲೀಸರು ಕಡತ ಯಜ್ಞ ಮಾಡಬೇಕಾದರೆ ಹಳೇ ಕಳ್ಳತನ ಪ್ರಕರಣವೊಂದು ಕಣ್ಣಿಗೆ ಬಿದ್ದಿದ್ದು, ತನಿಖೆ ಕೈಗೊಂಡಿದ್ದಾರೆ. ಕೊನೆಗೂ ಆರೋಪಿಯನ್ನು ಮದುರೈ ಜಿಲ್ಲೆಯ ಶಿವಕಾಶಿಯಲ್ಲಿ ಬಂಧಿಸಲಾಗಿದೆ. ಆತನ ಮೇಲೆ 1997ರಲ್ಲಿ 60 ರೂ. ಕದ್ದು ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು.
ಹಳೇ ಕೇಸ್‌ಗಳಲ್ಲಿ ತೆಪ್ಪಕುಲಂ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣವೂ ಒಂದಿತ್ತು. ಅಲ್ಲಿ ಆರೋಪಿ ಪನ್ನೀರ್ ಸೆಲ್ವಂ ಸಂತ್ರಸ್ತೆಯಿಂದ 60 ರೂ.ಗಳನ್ನು ಕದ್ದು ಪರಾರಿಯಾಗಿದ್ದ. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಆರೋಪಿ ಪನ್ನೀರ್ ಸೆಲ್ವಂ ಶಿವಕಾಶಿಯಲ್ಲಿ ಇರುವುದು ಗೊತ್ತಾಗಿತ್ತು. ಪೊಲೀಸರು ಜನಸಂಖ್ಯಾ ಸರ್ವೇಯರ್‌ಗಳ ಸೋಗಿನಲ್ಲಿ ಆತನ ಕುಟುಂಬವನ್ನು ಸಂಪರ್ಕಿಸಿ ಗುರುತು ಪತ್ತೆಯಾದ ಬಳಿಕ ಬಂಧಿಸಿದ್ದಾರೆ.