ಮುಂಬೈ ಮೇ 16: ಮೂರು ದಿನಗಳ ಹಿಂದೆ ಮುಂಬೈನಲ್ಲಿ ಬೃಹತ್ ಜಾಹೀರಾತು ಫಲಕು ಬಿದ್ದು 16 ಜನರ ಸಾವಿಗೆ ಕಾರಣವಾದವನನ್ನು ಮುಂಬೈ ಪೊಲೀಸರು ಇಂದು ಗುರುವಾರ ಉದಯಪುರದಲ್ಲಿ ಬಂಧಿಸಿದ್ದಾರೆ.
ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬೃಹತ್ ಎತ್ತದ ಜಾಹೀರಾತು ಫಲಕ ಬಿದ್ದು ಆಘಾತ ಸೃಷ್ಟಿಸಿತು.
ಈ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಹಾಕಿದ್ದ ಭವೇಶ್ ಭಿಂಡೆ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಖುದ್ದು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಘಾಟ್‌ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ನಿರ್ಮಿಸಿದ್ದ ಜಾಹೀರಾತು ಸಂಸ್ಥೆ ಇಗೋ ಮೀಡಿಯಾ ಪ್ರೈವೇಟ್ ಕಂಪನಿಯ ನಿರ್ದೇಶಕ ಭವೇಶ್ ಭಿಂಡೆ ಬಂಧಿಸಲಾಗಿದೆ. ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ.
ಅನಿರೀಕ್ಷಿತವಾಗಿ ಈ ಬೃಹತ್ 40×40 ಅಡಿಯ ಜಾಹೀರಾತು ಫಲಕ ಕುಸಿದು ಬಿದ್ದು ಕನಿಷ್ಠ 16 ಜನರನ್ನು ಬಲಿ ಪಡೆಯಿತು. ಸುಮಾರು 75 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಈ ಜಾಹೀರಾತು ಫಲಕವನ್ನು ಈ ಕಂಪನಿಯು10 ವರ್ಷಗಳ ಗುತ್ತಿಗೆಗೆ ನಿರ್ಮಿಸಿ ಕೊಟ್ಟಿತ್ತು. ಅಲ್ಲದೇ ಇಷ್ಟೊಂದು ದೊಡ್ಡ ಜಾಹೀರಾತು ಇದೇ ಮೊದಲಿಗೆ ಹಾಕಲಾಗಿದೆ ಎಂದು ಕಂಪನಿಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಇದನ್ನು ಭಾರತದ ಅತಿದೊಡ್ಡ ವಾಣಿಜ್ಯ ನೇಮ್‌ಬೋರ್ಡ್ ಎಂದು ಸಹ ಕಂಪನಿ ಹೇಳಿಕೊಂಡಿತ್ತು.