ಟೊಮೆಟೋಕ್ಕೆ ಸಿಗದ ಉತ್ತಮ ದರ: 40 ಟ್ರೇ ಟೊಮೆಟೊ ಬೀದಿಗೆ ಎಸೆದ ರೈತ

ಮೈಸೂರು: ಸಾಲ ಸೋಲ ಮಾಡಿ ಬೆಳೆದಿದ್ದ ಟೊಮೆಟೋಕ್ಕೆ ಉತ್ತಮ ದರ ಸಿಗದಕ್ಕೆ ಹತಾಶೆಗೊಂಡ ರೈತರು ಅದನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಎಪಿಎಂಸಿಯಲ್ಲಿ ಈ ಘಟನೆ ಸಂಭವಿಸಿದೆ.

ಹುಣಸೂರು ತಾಲೂಕಿನ ರಾಮಪಟ್ಟಣಂ ಗ್ರಾಮದ ರೈತರು ಕಷ್ಟಪಟ್ಟು ಟೊಮೆಟೋ ಬೆಳೆದಿದ್ದರು. ರೈತರೊಬ್ಬರು ಒಂದು ಎಕರೆ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿ ಕೃಷಿ ಮಾಡಿದ್ದರು.

ಎಪಿಎಂಸಿ ಮಾರುಕಟ್ಟೆಗೆ ತಂದಾಗ ಅದಕ್ಕೂ ಉತ್ತಮ ದರ ದೊರೆತಿಲ್ಲ. ಇದರಿಂದ ಆಕ್ರೋಶಗೊಂಡ ರೈತರೊಬ್ಬರು 40 ಟ್ರೇ ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಊರಿಗೆ ತೆರಳಿದ್ದಾರೆ. ಮಧ್ಯವರ್ತಿಗಳಿಂದ ಈ ರೀತಿ ಅನ್ಯಾಯವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Indian news

Popular Stories