ಮೈಸೂರು ದಸರಾ ಗಜಪಡೆ ಪಟ್ಟಿ ಬಿಡುಗಡೆ: ಈ ಬಾರಿ 9 ಆನೆಗಳಿಗೆ ಸ್ಥಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಬಾರಿ 9 ಆನೆಗಳಿಗೆ ದಸರಾ ಗಜಪಡೆಯಲ್ಲಿ ಸ್ಥಾನ ನೀಡಲಾಗಿದೆ.

ಬೆಂಗಳೂರಿನ ಅಶೋಕಪುರದಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೊದಲ ತಂಡದಲ್ಲಿ 9 ಆನೆಗಳು ಪಾಲ್ಗೊಳ್ಳಲಿದ್ದಾವೆ. ಇವುಗಳಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ಸೇರಿದ್ದಾನೆ.

ಗಜಪಡೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೆಣ್ಣಾನೆಗಳ ಗರ್ಭಧಾರಣಾ ಪರೀಕ್ಷಾ ವರದಿ ಬಾರದ ಕಾರಣ ಗಜಪಡೆ ಆಯ್ಕೆ ತಡವಾಗಿತ್ತು. ಆದರೇ ಸೋಮವಾರದಂದು ವರದಿ ಕೈ ಸೇರಿದೆ. ಈ ನಿಟ್ಟಿನಲ್ಲಿ ಗಜಪಡೆಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಹೀಗಿದೆ ಮೈಸೂರು ದಸರಾದ ಗಜಪಡೆಗಳ ಮೊದಲ ಪಟ್ಟಿ :

ಅಭಿಮನ್ಯು – ಮತ್ತಿಗೋಡು ಆನೆ ಶಿಬಿರ

ಭೀಮ – ಮತ್ತಿಗೋಡು ಆನೆ ಶಿಬಿರ

ಮಹೇಂದ್ರ -ಮತ್ತಿಗೋಡು ಆನೆ ಶಿಬಿರ

ಅರ್ಜುನ -ಬಳ್ಳೆ ಆನೆ ಶಿಬಿರ

ಧನಂಜಯ – ದುಬಾರೆ ಆನೆ ಶಿಬಿರ

ಗೋಪಿ – ದುಬಾರೆ ಆನೆ ಶಿಬಿರ

ಪಾರ್ಥಸಾರಥಿ – ರಾಮಾಪುರ ಆನೆ ಶಿಬಿರ

ವಿಜಯಾ – ದುಬಾರೆ ಆನೆ ಶಿಬಿರ

ವರಲಕ್ಷ್ಮಿ – ಭೀಮನಕಟ್ಟೆ ಆನೆ ಶಿಬಿರ

Latest Indian news

Popular Stories