ವಿಶ್ವವಿಖ್ಯಾತ ಮೈಸೂರು ಅರಮನೆಗೆ ಆಗಸ್ಟ್ 1 ಮತ್ತು 2ರಂದು ಪ್ರವೇಶ ನಿರ್ಬಂಧ

ಆಗಸ್ಟ್ 1 ಹಾಗೂ 2ರಂದು G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶದ ಗಣ್ಯರು ಮೈಸೂರು ಅರಮನೆ ವೀಕ್ಷಣೆಗೆ ಭೇಟಿ ನೀಡಲಿದ್ದಾರೆ. ಈ ಕಾರಣ ಎರಡು ದಿನಗಳ ಕಾಲ ಮೈಸೂರು ಅರಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ಆಗಸ್ಟ್ 2ರಂದು ರಾತ್ರಿ 7 ರಿಂದ 8ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದ್ದು. ಈ ಕಾರ್ಯಕ್ರಮದ ವೀಕ್ಷಣೆಗೂ ಕೂಡ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ವಿದೇಶಿ ಗಣ್ಯರ ಅಗತ್ಯ ಮುಂಜಾಗ್ರತಾ ದೃಷ್ಟಿಯಲ್ಲಿ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರವಾಸಿಗರು ಈ ಮಾಹಿತಿಯನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

Latest Indian news

Popular Stories