ಮೈಸೂರಿನ ವಿಜಯನಗರ ಮಸಾಜ್ ಪಾರ್ಲರ್ ಮೇಲೆ ದಾಳಿ | ಮಡಿಕೇರಿ ಮೂಲದ ಓರ್ವ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ರಕ್ಷಣೆ

ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಮಡಿಕೇರಿಯ ಓರ್ವ ಯುವತಿ ಸೇರಿದಂತೆ ಐವರನ್ನು ರಕ್ಷಿಸಿದ ಘಟನೆ ನಡೆದಿದೆ.

ವಿಜಯನಗರದಲ್ಲಿರುವ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು ಓರ್ವ ಯುವತಿ ಮಡಿಕೇರಿಯ ಮೂಲದವಳು ಇನ್ನುಳಿದ ಇಬ್ಬರು ಸ್ಥಳೀಯರು ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಓರ್ವ ದಂದೆ ಕೋರ ಮಹಿಳೆ ಒಬ್ಬ ಪಿಂಪ್ ಹಾಗೂ ಇಬ್ಬರು ಗಿರಾಕಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಮೈಸೂರಿನ ಒಡನಾಡಿ ಸಂಸ್ಥೆಯವರಿಗೆ ದೊರಕಿದ ಖಚಿತ ಮಾಹಿತಿ ಅನ್ವಯ ಪೊಲೀಸ್ ಆಯುಕ್ತರಾದ ಗಜೇಂದ್ರ ಪ್ರಸಾದ್ ಅವರಿಗೆ ನೀಡಿದ ದೊರಿನ ಅನ್ವಯ ಪೊಲೀಸರು ಈ ದಾಳಿ ನಡೆಸಿದ್ದಾರೆ.

Latest Indian news

Popular Stories