ಮೈಸೂರಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ಮೈಸೂರು : ಮೈಸೂರಿನ ಡಿ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಸಾಲುಂಡಿ ಗ್ರಾಮದ ಕನಕರಾಜು ಎನ್ನಲಾಗಿದೆ. ಮೃತ ಯುವಕ ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇಲ್ಲದೇ ಇನ್ನೂ ನಾಲ್ಕೈದು ಮಂದಿ ಘಟನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜೆ.ಟಿ ದೇವೇಗೌಡ ಅವರು ಸಿಎಂ ಈ ಕೂಡಲೇ ಮಾಹಿತಿಯನ್ನು ಪಡೆದುಕೊಂಡು ಸಂತ್ರಸ್ಥರ ನೆರವಿಗೆ ದಾವಿಸ ಬೇಕು ಅಂಥ ಆಗ್ರಹಿಸಿದ್ದಾರೆ. ಇದಲ್ಲದೇ ಸ್ಥಳೀಯ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

Latest Indian news

Popular Stories