ಮೈಸೂರಿನ ‘CM ಸಿದ್ದರಾಮಯ್ಯ’ ನಿವಾಸದಲ್ಲಿ ಧಿಡೀರ್ ಸಭೆ ನಿಗದಿ;ಹಲವು ಶಾಸಕರು ಭಾಗಿ..!

ಮೈಸೂರು : ವಿಪಕ್ಷಗಳ ಪಾದಯಾತ್ರೆ ಬೆನ್ನಲ್ಲೇ ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಧಿಡೀರ್ ಸಭೆ ಏರ್ಪಡಿಸಲಾಗಿದ್ದು, ಹಲವು ಶಾಸಕರು ಭಾಗಿಯಾಗಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್, ಬಿಜೆಪಿ ಪಾದಯಾತ್ರೆ ಹಿನ್ನೆಲೆ ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಧಿಡೀರ್ ಸಭೆ ಏರ್ಪಡಿಸಲಾಗಿದ್ದು, ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಸಭೆಯಲ್ಲಿ ಮೈಸೂರು ಭಾಗದ ಸಚಿವರು, ಕಾಂಗ್ರೆಸ್ ಹಲವು ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದಾರೆ. ಲಘು ಉಪಹಾರದ ಬಳಿಕ ಸಭೆ ಏರ್ಪಡಿಸಲಾಗಿದ್ದು, ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

Latest Indian news

Popular Stories