ಚೆನ್ನೈ: ಬೆಂಗಳೂರು ದಕ್ಷಿಣ ಲೋಕಸಭಾ (Bengaluru South Lok Sabha) ಸಂಸದ ತೇಜಸ್ವಿ ಸೂರ್ಯ (MP Tejasvi Surya) ಅವರು 2022ರ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai airport) ಯಾವುದೇ ಅನುಮತಿಯನ್ನು ಸಹ ಪಡೆಯದೇ ವಿಮಾನದ ತುರ್ತು ನಿರ್ಗಮನವನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಿದ್ದರೂ ವಿಮಾನಯಾನ ಸಂಸ್ಥೆ (Airline) ಇಂಡಿಗೋ (IndiGo) ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿರುವುದು ದೊಡ್ಡ ಪ್ರಶ್ನೆಯಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ವಿಮಾನದಲ್ಲಿ ತುರ್ತು ನಿರ್ಗಮನವನ್ನು ಪ್ರಯಾಣಿಕರೊಬ್ಬರು ತೆರೆದಿದ್ದಾರೆ, ಅಂದರೆ ಸಂಸದ ತೇಜಸ್ವಿ ಸೂರ್ಯ ತೆರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಬಿಜೆಪಿ ಸಂಸದನ ಮೇಲೆ ಆರೋಪಿಸಿದ್ದಾರೆ. ತುರ್ತು ನಿರ್ಗಮನವನ್ನು ತೆರೆದವರು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿಮಾನದಲ್ಲಿ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸುತ್ತಿದ್ದರು. ಈ ವೇಳೆ ತೇಜಸ್ವಿ ಸೂರ್ಯ ಅವರು ತುರ್ತು ನಿರ್ಗಮನದ ಬಳಿ ಕುಳಿತಿದ್ದರು ಮತ್ತು ಕಡ್ಡಾಯ ತುರ್ತು ಕಾರ್ಯವಿಧಾನಗಳ ಬಗ್ಗೆಯೂ ಅವರಿಗೆ ತಿಳಿಸಲಾಯಿತು. ಈ ಎಲ್ಲಾವನ್ನು ತೇಜಸ್ವಿ ಸೂರ್ಯ ಕೂಡ ಆಲಿಸುತ್ತಿದ್ದರು. ಆದರೆ ಕೆಲವು ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ಲಿವರ್ ಅನ್ನು ಎಳೆದು, ತುರ್ತು ನಿರ್ಗ ತುರ್ತು ನಿರ್ಗಮನವನ್ನು ತೆರೆಯಲಾಯಿತು. ತಕ್ಷಣ, ನಮ್ಮೆಲ್ಲರನ್ನೂ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಆದೇಶಿಸಲಾಯಿತು ಎಂದು ಹೇಳಿದ್ದಾರೆ.
ನಂತರ ಕ್ಷಮೆಯಾಚಿಸಿದ ತೇಜಸ್ವಿ ಸೂರ್ಯ
ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸ್ಥಳಕ್ಕೆ ಆಗಮಿಸಿದರು ಹಾಗೂ ಮತ್ತೆ ವಿಮಾನ ಹಾರಾಟ ಆರಂಭಿಸಲು ಕನಿಷ್ಠ ಎರಡು ಗಂಟೆಗಳ ಕಾಲ ಬೇಕಾಯಿತು. ಈ ನಿಯಮ ಉಲ್ಲಂಘನೆಯಾಗಿರುವುದರಿಂದ ಕ್ಷಮೆಯಾಚಿಸಲು ಸಂಸದರನ್ನು ಕೋರಲಾಗಿದ್ದು, ಹಾಗಾಗಿ ಲಿಖಿತ ಪತ್ರದ ಮೂಲಕ ಕ್ಷಮೆಯಾಚಿಸಿದರು.
ತೇಜಸ್ವಿ ಸೂರ್ಯ ಜೊತೆ ಅಣ್ಣಾಮಲೈ ಕೂಡ ಇದ್ದರು
ಕ್ಷಮೆಯಾಚಿಸಿದ ನಂತರ, ಸಂಸದರಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು. ಆದರೆ ಘಟನೆಯ ನಂತರ ಕ್ಯಾಬಿನ್ ಸಿಬ್ಬಂದಿ ಅವರಿಗೆ ಬೇರೆ ಆಸನವನ್ನು ನೀಡಿದರು.. “ಅವರನ್ನು ತುರ್ತು ನಿರ್ಗಮನದ ಬಳಿಯ ಆಸನಗಳಿಂದ ಸ್ಥಳಾಂತರಿಸಲಾಯಿತು ಮತ್ತು ಹಿಂಭಾಗದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಲಾಯಿತು. ತೇಜಸ್ವಿ ಸೂರ್ಯ ಅವರೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕೂಡ ಇದ್ದರು ಎಂದು ವರದಿ ಮಾಡಲಾಗಿದೆ.
ತುರ್ತು ನಿರ್ಗಮನ ತೆಗೆದವರು ಯಾರು ಅಂತ ಗೊತ್ತಿಲ್ಲ
ಈ ಹಿಂದೆ ಬಿಜೆಪಿಯಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರ ಬಿ ಟಿ ಅರಸಕುಮಾರ್ ಕೂಡ ಇದೇ ವಿಮಾನದಲ್ಲಿದ್ದರು. ಮಾನದ ತುರ್ತು ದ್ವಾರದಲ್ಲಿ ಗಾಳಿ ಸೋರಿಕೆಯಾಗುತ್ತಿದೆ ಎಂದು ಪ್ರಯಾಣಿಕರಿಗೆ ಕಾರಣ ನೀಡಿ ನಂತರ ಅವರನ್ನು ಬಸ್ಗೆ ಸ್ಥಳಾಂತರಿಸಲಾಯಿತು ಮತ್ತು ಸಿಐಎಸ್‌ಎಫ್ ಭದ್ರತಾ ತಪಾಸಣೆ ನಡೆಸಿದ ನಂತರವೇ ನಮಗೆ ವಿಮಾನವನ್ನು ಮತ್ತೆ ಹತ್ತಲು ಅನುಮತಿ ನೀಡಲಾಯಿತು.
ವಿಮಾನದಲ್ಲಿ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ಅವರನ್ನು ನೋಡಿರುವುದನ್ನು ಅರಸಕುಮಾರ್ ಖಚಿತಪಡಿಸಿದ್ದಾರೆ. ಆದರೆ, ಈ ಇಬ್ಬರಲ್ಲಿ ತುರ್ತು ನಿರ್ಗಮನವನ್ನು ಯಾರು ತೆರೆದರು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.