ಕಾಸರಗೋಡು: ಕಾರಿನಲ್ಲಿ ಬೆಂಕಿ : ಪ್ರಯಾಣಿಕರು ಪಾರು : ಕಾರು ಸಂಪೂರ್ಣ ಭಸ್ಮ

ಕಾರೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ
ಘಟನೆ ವೆಳ್ಳರಿಕುಂಡು ಸಮೀಪದ ಮಾಲೋ ಎಂಬಲ್ಲಿ ನಡೆದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ವಿವಾಹ ನಿಶ್ಚಯಕ್ಕೆ ಕುಟುಂಬವೊಂದು ಕಾರಿನಲ್ಲಿ
ತೆರಳುತ್ತಿತ್ತು. ಕಾರು ಮಾಲೋ ಎಂಬಲ್ಲಿಗೆ ತಲಪಿದಾಗ
ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರು ನಿಲ್ಲಿಸಿ
ಎಲ್ಲರು ಹೊರ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.ಕಾರು ಸಂಪೂರ್ಣ ಅಗ್ನಿಗಾಹುತಿಯಾಗಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.

Latest Indian news

Popular Stories