ಗೋವಾ: ಯುವ ಜೋಡಿ ಪಲೋಲೆಮ್ ಬೀಚ್ ನಲ್ಲಿ ಮುಳುಗಿ ಮೃತ್ಯು

ಪಣಜಿ: ಪ್ರೇಮಿಗಳ ದಿನದಂದು ಜೊತೆಯಾಗಿ ತಿರುಗಾಡಲು ಬಂದ ಯುವ ದಂಪತಿಯೊಂದು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗೋವಾದ ಪಲೋಲೆಮ್ ಬೀಚ್ ನಲ್ಲಿ ಮಂಗಳವಾರ (ಫೆ.14 ರಂದು) ವರದಿಯಾಗಿದೆ.

ಸುಪ್ರಿಯಾ ದುಬೆ (26) ಮತ್ತು ವಿಭು ಶರ್ಮಾ (27) ಮೃತ ಜೋಡಿ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಪ್ರದೇಶದ ಮೂಲದವರು ಎನ್ನಲಾಗಿದೆ.

ಕಳೆದ ಕೆಲದಿನಗಳಿಂದ ಗೋವಾ ಪ್ರವಾಸದಲ್ಲಿದ್ದ ದಂಪತಿ ಸೋಮವಾರ ರಾತ್ರಿಯೇ ಬೀಚ್‌ ನಲ್ಲಿ ಈಜುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅದರಂತೆ ಮೊದಲು ಸುಪ್ರಿಯಾ ದುಬೆ ಈಜುವಾಗ ಮುಳುಗಿದ್ದಾರೆ. ಮುಳುಗುತ್ತಿದ್ದ ಆಕೆಯನ್ನು ರಕ್ಷಿಸಲು ಇಳಿದ ವಿಭು ಶರ್ಮಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ರಕ್ಷಣಾ ಸಿಬ್ಬಂದಿಗಳು ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸುಪ್ರಿಯಾ ಮತ್ತು ವಿಭು ಸಂಬಂಧಿಕರಾಗಿದ್ದು, ಅವರು ಗೋವಾದಲ್ಲಿದ್ದಾರೆ ಎಂಬುದು ಅವರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories