ಭಾರತ ಮೂಲದ ನೀಲ್ ಮೋಹನ್ ಯೂಟ್ಯೂಬ್‌ನ ಹೊಸ ಸಿಇಒ!

ನವದೆಹಲಿ: ಯೂಟ್ಯೂಬ್ ಸಿಇಒ ಸುಸಾನ್ ವೊಜ್ಸಿಕಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ಭಾರತ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ.

YouTube ನ ಮೂಲ ಕಂಪನಿ Alphabet Inc ಈ ಮಾಹಿತಿಯನ್ನು ಗುರುವಾರ ನೀಡಿದ್ದು, ಯೂಟ್ಯೂಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಸಾನ್ ವೊಜ್ಸಿಕಿ ಅವರು ಒಂಬತ್ತು ವರ್ಷಗಳ ನಂತರ ವಿಶ್ವದ ಅತಿದೊಡ್ಡ ಆನ್‌ಲೈನ್ ವೀಡಿಯೊ ಪ್ಲಾಟ್‌ಫಾರ್ಮ್‌ ನಿಂದ ದೂರ ಸರಿದಿದ್ದಾರೆ. 54 ವರ್ಷದ MS Wojcicki ಅವರು “ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಬಗ್ಗೆ ನಾನು ಆಸಕ್ತಿ ಹೊಂದಿದ್ದೇನೆ ಎಂದು ಹೇಳುವ ಮೂಲಕ ಯೂಟ್ಯೂಬ್ ನಿಂದ ಹೊರ ನಡೆಯುವ ಕುರಿತು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಗೂಗಲ್‌ನಲ್ಲಿ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿದ್ದ ವೊಜ್ಸಿಕಿ, 2014 ರಲ್ಲಿ ಯೂಟ್ಯೂಬ್‌ನ ಸಿಇಒ ಆದರು. ಅವರು Google ನ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಸುಮಾರು 25 ವರ್ಷಗಳಿಂದ ಪೋಷಕ ಕಂಪನಿ Alphabet Inc ಜೊತೆಗೆ ಇದ್ದಾರೆ. Google ಗೆ ಮೊದಲು, Ms Wojcicki ಇಂಟೆಲ್ ಕಾರ್ಪ್ ಮತ್ತು ಬೈನ್ & ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇದರ ಬೆನ್ನಲ್ಲೇ ವಿಶ್ವದ ಅತ್ಯಂತ ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ YouTube ಗೆ ಭಾರತೀಯ ಮೂಲದ ನೀಲ್ ಮೋಹನ್ ಈಗ ಯೂಟ್ಯೂಬ್‌ನ ಮುಂದಿನ ಸಿಇಒ ಆಗಲಿದ್ದಾರೆ ಎಂದು ಅಲ್ಫಾಬೆಟ್ ಕಂಪನಿ ಹೇಳಿದೆ. 

ನೀಲ್ ಮೋಹನ್ ಅವರು ಯೂಟ್ಯೂಬ್‌ನ ಹಿರಿಯ ಉಪಾಧ್ಯಕ್ಷರ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ. ನೀಲ್ ಮೋಹನ್ ಪ್ರಸ್ತುತ ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿದ್ದು, ಅವರು ನವೆಂಬರ್ 2015 ರಲ್ಲಿ YouTube ನೊಂದಿಗೆ ಕೆಲಸ ಆರಂಭಿಸಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ನೀಲ್ ಮೋಹನ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ ಮತ್ತು ಎಕ್ಸ್‌ಚೇಂಜ್ ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.

ನೀಲ್ ಮೋಹನ್ ಅವರ ನೇಮಕಾತಿಯು ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಜನರ ಹೆಚ್ಚುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.

ಯೂಟ್ಯೂಬ್‌ನ ಮಾತೃ ಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಕೂಡ ಭಾರತೀಯ ಮೂಲದವರಾಗಿದ್ದು, ಗೂಗಲ್ ಕೂಡ ಈ ಆಲ್ಫಾಬೆಟ್ ಕಂಪನಿಯ ಒಡೆತನದಲ್ಲಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಸೇರಿದಂತೆ ವಿಶ್ವದ ಅನೇಕ ದೊಡ್ಡ ತಂತ್ರಜ್ಞಾನ ಕಂಪನಿಗಳನ್ನು ಪ್ರಸ್ತುತ ಭಾರತೀಯ ಮೂಲದವರೇ ನಡೆಸುತ್ತಿದ್ದಾರೆ.

Latest Indian news

Popular Stories