ನವದೆಹಲಿ: ದೇಶದೆಲ್ಲೆಡೆ 5ಜಿ ನೆಟವರ್ಕ್ ವಿಸ್ತರಣೆಯಾಗುತ್ತಿರುವ ನಡುವೆಯೇ ಮೊಬೈಲ್ ಡೌನ್‌ಲೋಡ್ ವೇಗಕ್ಕೆ ಸಂಬಂಧಿಸಿದ ಜಾಗತಿಕ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಉತ್ತಮ ಸ್ಥಾನ ಗಳಿಸಿದೆ.
ಓಕ್ಲಾ ವರದಿಯ ಪ್ರಕಾರ, ಜಾಗತಿಕ ಪಟ್ಟಿಯಲ್ಲಿ 2022ರ ನವೆಂಬರ್‌ನಲ್ಲಿ ಭಾರತ 105ನೇ ಸ್ಥಾನದಲ್ಲಿತ್ತು. 2022ರ ಡಿಸೆಂಬರ್‌ನಲ್ಲಿ 79ನೇ ಸ್ಥಾನ ಪಡೆಯುವ ಮೂಲಕ ರ್‍ಯಾಂಕಿಂಗ್ ನಲ್ಲಿ ಬಡ್ತಿ ಪಡೆದಿದೆ.
ದೇಶದಲ್ಲಿ ಮೀಡಿಯನ್ ಮೊಬೈಲ್ ಡೌನ್‌ಲೋಡ್ ಸ್ಪೀಡ್ ನವೆಂಬರ್‌ನಲ್ಲಿ 18.26 ಎಂಬಿಪಿಎಸ್ ಇದ್ದದ್ದು, ಡಿಸೆಂಬರ್‌ನಲ್ಲಿ 25.29 ಎಂಬಿಪಿಎಸ್‌ಗೆ ಏರಿಕೆಯಾಗಿತ್ತು.
ಇನ್ನೊಂದೆಡೆ, ಒಟ್ಟಾರೆ ಮೀಡಿಯನ್ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ವೇಗದಲ್ಲಿ ಭಾರತದ ರ್‍ಯಾಂಕಿಂಗ್ ಕಳೆದ ನವೆಂಬರ್‌ನಲ್ಲಿ 80ನೇ ಸ್ಥಾನದಲ್ಲಿ ಇದ್ದದ್ದು, ಡಿಸೆಂಬರ್‌ನಲ್ಲಿ 81ನೇ ಸ್ಥಾನಕ್ಕೆ ಕುಸಿಯಿತು.